Back to Top

ಸರ್ಜರಿ ದಿನವೇ ದರ್ಶನ್ ಪತ್ನಿಯ ಸ್ಪೆಷಲ್ ಪೋಸ್ಟ್ ಅಭಿಮಾನಿಗಳಲ್ಲಿ ಕುತೂಹಲ

SSTV Profile Logo SStv December 11, 2024
ಸರ್ಜರಿ ದಿನವೇ ದರ್ಶನ್ ಪತ್ನಿಯ ಸ್ಪೆಷಲ್ ಪೋಸ್ಟ್
ಸರ್ಜರಿ ದಿನವೇ ದರ್ಶನ್ ಪತ್ನಿಯ ಸ್ಪೆಷಲ್ ಪೋಸ್ಟ್
ಸರ್ಜರಿ ದಿನವೇ ದರ್ಶನ್ ಪತ್ನಿಯ ಸ್ಪೆಷಲ್ ಪೋಸ್ಟ್ ಅಭಿಮಾನಿಗಳಲ್ಲಿ ಕುತೂಹಲ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಅವಧಿ ಮುಂದುವರಿಸಲಾಗಿದೆ. ಇತ್ತ, ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಗೌರಿ ಹೂ (ಸ್ಪೈಡರ್ ಲಿಲ್ಲಿ)ಯ ಫೋಟೋ ಹಂಚಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಕನ್ನಡದಲ್ಲಿ ಗೌರಿ ಹೂ ಎಂದು ಕರೆಯಲಾಗುವ ಈ ಹೂ, ಗಣೇಶ ಹಬ್ಬದ ಸಂದರ್ಭದಲ್ಲಿ ಅರಳುವುದು ವಿಶೇಷ. ಇದನ್ನು ಶೇರ್ ಮಾಡುವ ಮೂಲಕ ವಿಜಯಲಕ್ಷ್ಮಿ ಗಣೇಶನ ಮೊರೆ ಹೋಗಿರುವುದಾ? ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಹುಟ್ಟಿದೆ. ಪೋಸ್ಟ್‌ಗೆ ಅವರು ಯಾವುದೇ ಕ್ಯಾಪ್ಷನ್ ಸೇರಿಸಿಲ್ಲ. ಈ ನಡುವೆ, ದರ್ಶನ್ ಅವರ ಶಸ್ತ್ರಚಿಕಿತ್ಸೆ ಮತ್ತು ಹೆಚ್ಚಿನ ದಿನಗಳ ವಿಶ್ರಾಂತಿ ಅವಶ್ಯಕತೆ ಕುರಿತು ವಕೀಲರು ವಿವರಿಸಿರುವುದರಿಂದ, ಅಭಿಮಾನಿಗಳಲ್ಲಿ ಆತಂಕವೂ ಹೆಚ್ಚಾಗಿದೆ. ದರ್ಶನ್ ಪರ ವಕೀಲರು, ಶಸ್ತ್ರಚಿಕಿತ್ಸೆ ಮಾಡುವ ಅಗತ್ಯವಿದೆ ಎಂಬ ವೈದ್ಯಕೀಯ ಅಭಿಪ್ರಾಯ ಕೋರ್ಟ್‌ಗೆ ಸಲ್ಲಿಸಿದ್ದಾರೆ. ನ್ಯಾಯಾಲಯ ದರ್ಶನ್ ಸೇರಿದಂತೆ 7 ಆರೋಪಿಗಳ ವಿರುದ್ಧದ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದ್ದು, ತಾತ್ಕಾಲಿಕವಾಗಿ ದರ್ಶನ್‌ಗೆ ರಿಲೀಫ್ ಸಿಕ್ಕಿದೆ. ಇದರಿಂದ ದರ್ಶನ್ ಅಭಿಮಾನಿಗಳು ಅವರ ಚೇತರಿಕೆಗೆ ಪ್ರಾರ್ಥಿಸುತ್ತಿದ್ದಾರೆ.