ಬ್ಯಾಂಗ್ ಬಂಗಾರಿ ಹುಚ್ಚಾಟ: ಸಂತೋಷ್ ಥಿಯೇಟರ್‌ನಲ್ಲಿ ‘ಎಕ್ಕ’ ಚಿತ್ರದ ಅಬ್ಬರ ಜೋರಾಗಿ ಸದ್ದು!


ಬೆಂಗಳೂರು ಕೆ.ಜಿ. ರಸ್ತೆಯ ಸಂತೋಷ್ ಥಿಯೇಟರ್‌ನಲ್ಲಿ ಯುವರಾಜ್ ಕುಮಾರ್ ಅಭಿನಯದ ‘ಎಕ್ಕ’ ಸಿನಿಮಾದ ಸಂಭ್ರಮ ತೀವ್ರವಾಗಿದ್ದು, ವಿಶೇಷವಾಗಿ "ಎಕ್ಕ ಮಾರ್" ಹಾಡಿಗೆ ಅಭಿಮಾನಿಗಳು ಸ್ಕ್ರೀನ್ ಮುಂದೆ ಕುಣಿದು ಕುಪ್ಪಳಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಚಿತ್ರದಲ್ಲಿ ಯುವರಾಜ್ ಎಂಟ್ರಿ ಕೊಟ್ಟ ಕ್ಷಣದಿಂದಲೇ ಥಿಯೇಟರ್ ಆವರಣದಲ್ಲಿ ಉತ್ಸಾಹದ ಜ್ವರ ಹರಡಿದ್ದು, ಫ್ಯಾನ್ಸ್ ನೇರವಾಗಿ ಪರದೆಯ ಮುಂದೆ ಡ್ಯಾನ್ಸ್ ಮಾಡಿ, ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಇವರ ಸಂಭ್ರಮಕ್ಕೆ ಇಡೀ ಥಿಯೇಟರ್ ಆವರಣವೇ ಹಬ್ಬದ ವಾತಾವರಣಕ್ಕೆ ಒಳಗಾಗಿದೆ.
ರಾಜ್ಯಾದ್ಯಂತ 300ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್ ಆಗಿರುವ ‘ಎಕ್ಕ’, ಸಿಂಗಲ್ ಥಿಯೇಟರ್‌ಗಳಿಂದ ಮಲ್ಟಿಪ್ಲೆಕ್ಸ್‌ವರೆಗೆ ಎಲ್ಲೆಡೆ ಗಮನ ಸೆಳೆದಿದೆ. ಆದರೆ ಸಂತೋಷ್ ಥಿಯೇಟರ್‌ನಲ್ಲಿ ನಡೆದಿರುವ ಉತ್ಸಾಹದ ಬೆಳವಣಿಗೆ ವಿಶೇಷವಾಗಿದೆ.
ವೀರೇಶ್ ಥಿಯೇಟರ್‌ಗೆ ಬಂದ ಯುವರಾಜ್‌ಕುಮಾರ್ ಅವರನ್ನು ಅಭಿಮಾನಿಗಳು ಹೂಮಳೆ ಸುರಿಸಿ ಸ್ವಾಗತಿಸಿದರು. ಸಹಿತ ಸನ್ಮಾನ ಕೂಡ ಆಯಿತು. ಮೊದಲು ಅರ್ಧದಲ್ಲಿ ಸಿನಿಮಾ ಗಂಭೀರ ಸ್ಕ್ರೀನ್ ಪ್ಲೇ ಹೊಂದಿದ್ದು, ಪ್ರೇಕ್ಷಕರು ಟ್ವಿಟರ್‌ನಲ್ಲಿ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಹೊಸಪೇಟೆನಲ್ಲಿ ಕೂಡ ಚಿತ್ರಕ್ಕೆ ಅದ್ದೂರಿ ಓಪನಿಂಗ್ ಸಿಕ್ಕಿದ್ದು, ಬೆಳಗ್ಗೆ 6 ಗಂಟೆಗೇ ಶೋ ನಡೆದಿರುವುದೇ ಅದಕ್ಕೆ ಸಾಕ್ಷಿ. ಸಾಮಾಜಿಕ ಜಾಲತಾಣಗಳಲ್ಲಿ ಈ ಎಲ್ಲ ಕ್ಷಣಗಳ ವಿಡಿಯೋಗಳು ಹರಿದಾಡುತ್ತಿದ್ದು, 'ಎಕ್ಕ' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಭರ್ಜರಿ ಎಂಟ್ರಿ ಕೊಟ್ಟಿದೆ ಎನ್ನಬಹುದು.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
