Back to Top

ಸಂಕ್ರಾಂತಿಗೆ ಕನ್ನಡದ ಎರಡು ಚಿತ್ರಗಳು ತೆರೆಗೆ ಪರಭಾಷಾ ಚಿತ್ರಗಳಿಗೆ ಸೆಡ್ಡು

SSTV Profile Logo SStv December 11, 2024
ಸಂಕ್ರಾಂತಿಗೆ ಕನ್ನಡದ ಎರಡು ಚಿತ್ರಗಳು ತೆರೆಗೆ
ಸಂಕ್ರಾಂತಿಗೆ ಕನ್ನಡದ ಎರಡು ಚಿತ್ರಗಳು ತೆರೆಗೆ
ಸಂಕ್ರಾಂತಿಗೆ ಕನ್ನಡದ ಎರಡು ಚಿತ್ರಗಳು ತೆರೆಗೆ ಪರಭಾಷಾ ಚಿತ್ರಗಳಿಗೆ ಸೆಡ್ಡು ಈ ಬಾರಿ ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಕನ್ನಡದ 2 ಹೊಸ ಚಿತ್ರಗಳು ತೆರೆಗೆ ಬರಲಿದೆ. ಶರಣ್ ನಟನೆಯ ಹಾರರ್-ಕಾಮಿಡಿ ‘ಛೂ ಮಂತರ್’ ಮತ್ತು ಶ್ರೀನಗರ ಕಿಟ್ಟಿ-ರಚಿತಾ ರಾಮ್ ಅಭಿನಯದ ‘ಸಂಜು ವೆಡ್ಸ್ ಗೀತಾ-2’ ಜನವರಿ 10ಕ್ಕೆ ಪ್ರೇಕ್ಷಕರಿಗೆ ಸಪರ್ತಿಯಾಗುತ್ತಿವೆ. ‘ಛೂ ಮಂತರ್’ ನವನೀತ್ ನಿರ್ದೇಶನದ ಹಾಸ್ಯ-ಭಯಾನಕ ಚಿತ್ರವಾಗಿದ್ದು, ಶರಣ್ ಜೊತೆಗೆ ಅದಿತಿ ಪ್ರಭುದೇವ, ಚಿಕ್ಕಣ್ಣ, ಮೇಘನಾ ಗಾಂವ್ಕರ್ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಟೀಸರ್ ಹಾಗೂ ಹಾಡುಗಳು ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿವೆ. ಇನ್ನು ‘ಸಂಜು ವೆಡ್ಸ್ ಗೀತಾ-2’ ನಾಗಶೇಖರ್ ನಿರ್ದೇಶನದಲ್ಲಿ, ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ನಟಿಸುತ್ತಿದ್ದು, ಚಿತ್ರದ ಹಾಡುಗಳು ಪ್ರೇಕ್ಷಕರ ಮನ ಗೆದ್ದಿವೆ. ಈ ಸಿನಿಮಾ ತಂಡ ಚಿತ್ರಮಂದಿರಗಳಲ್ಲಿ ಹೊಸ ಹಿಟ್ ನಿರೀಕ್ಷಿಸುತ್ತಿದೆ. ಸಂಕ್ರಾಂತಿ ಹಬ್ಬಕ್ಕೆ ತೆಲುಗು, ತಮಿಳಿನ ದೊಡ್ಡ ಚಿತ್ರಗಳ ಎದುರು ಕನ್ನಡದ ಚಿತ್ರಗಳು ತೆರೆಗೆ ಬರುವುದು ಕನ್ನಡ ಚಿತ್ರರಂಗದ ದೃಢನಿಶ್ಚಯವನ್ನು ತೋರಿಸುತ್ತದೆ. ಈ ಬಾರಿ ಕನ್ನಡ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಯಶಸ್ಸು ಸಾಧಿಸುವ ನಿರೀಕ್ಷೆಯಿದೆ.