Back to Top

‘ಸಲಾರ್ 2’ ಬಳಿಕ ರಾಮ್ ಚರಣ್ ಜೊತೆ ಸಿನಿಮಾ: ಪ್ರಶಾಂತ್ ನೀಲ್ ಹೊಸ ಯೋಜನೆ

SSTV Profile Logo SStv July 16, 2025
‘ಸಲಾರ್ 2’ ಬಳಿಕ ರಾಮ್ ಚರಣ್ ಜೊತೆ ಸಿನಿಮಾ
‘ಸಲಾರ್ 2’ ಬಳಿಕ ರಾಮ್ ಚರಣ್ ಜೊತೆ ಸಿನಿಮಾ

‘ಕೆಜಿಎಫ್’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್, ಈಗಾಗಲೇ ತೆಲುಗು ಚಿತ್ರರಂಗದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಜೂ. ಎನ್‌ಟಿಆರ್ ಜೊತೆ ಸಿನಿಮಾ ಮಾಡುತ್ತಿರುವ ಅವರು, ನಂತರ ಪ್ರಭಾಸ್ ಅಭಿನಯದ ‘ಸಲಾರ್ 2’ ಚಿತ್ರವನ್ನು ಹ್ಯಾಂಡಲ್ ಮಾಡಲಿದ್ದಾರೆ.

ಇದಾದ ಬಳಿಕ ಪ್ರಶಾಂತ್ ನೀಲ್, ಮತ್ತೊಬ್ಬ ತೆಲುಗು ಸೂಪರ್‌ಸ್ಟಾರ್ ರಾಮ್ ಚರಣ್ ಜೊತೆ ಹೊಸ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ. ಈ ಯೋಜನೆಗೆ ಸಂಬಂಧಿಸಿದಂತೆ ದಿಲ್ ರಾಜು ನಿರ್ಮಾಪಕನಾಗಿ ಬಂಡವಾಳ ಹೂಡಲಿದ್ದಾರೆ ಎಂದು ತಿಳಿದು ಬಂದಿದೆ.

ಇದಕ್ಕೆ ಮೊದಲು ಅಲ್ಲು ಅರ್ಜುನ್ ಜೊತೆಗೆ ‘ರಾವಣಂ’ ಎಂಬ ಹೆಸರಿನಲ್ಲಿ ಸಿನಿಮಾ ಮಾಡುವ ಸುದ್ದಿ ಹರಿದಾಡಿತ್ತು. ಆದರೆ ಇದೀಗ ಅದೇ ಕಥೆಯನ್ನು ರಾಮ್ ಚರಣ್‌ಗಾಗಿ ರೂಪಾಂತರಿಸಲಾಗುತ್ತಿದೆ.

ನೀಲಿನ ಹೊಸ ಸಿನಿಮಾ ಯೋಜನೆಗಳು 2027ರ ಅಂತ್ಯದವರೆಗೆ ತುಂಬಿ ತುಳುಕುತ್ತಿದ್ದು, ಅವರು ಮತ್ತೆ ಕನ್ನಡ ಚಿತ್ರರಂಗಕ್ಕೆ ಬರಲು ಕನಿಷ್ಠ ನಾಲ್ಕು-ಐದು ವರ್ಷಗಳು ಬೇಕಾಗಲಿದೆ. ಇದರಿಂದ ಕನ್ನಡ ಚಿತ್ರರಸಿಕರಿಗೆ ನಿರೀಕ್ಷೆಗೆ ಇನ್ನೂ ಕೆಲ ಕಾಲ ಕಾಯಬೇಕಾದಂತಾಗಿದೆ.