Back to Top

ರೂಧಿರಂ ಟೀಸರ್ ಸೈಕೋಪಾತ್ ರೂಪದಲ್ಲಿ ರಾಜ್ ಬಿ ಶೆಟ್ಟಿ ಬೆಚ್ಚಿ ಬೀಳಿಸಿದ್ದಾರೆ ಕನ್ನಡದ ನಟ ಮತ್ತು ನಿರ್ದೇಶಕ ರಾಜ್ ಬಿ ಶೆಟ್ಟಿ ಮಾಲಿವುಡ್‌ನಲ್ಲಿ ಹೊಸ ಪರಿಚಯ ಮೂಡಿಸಿದ್ದಾರೆ

SSTV Profile Logo SStv November 25, 2024
ಸೈಕೋಪಾತ್ ರೂಪದಲ್ಲಿ ರಾಜ್ ಬಿ ಶೆಟ್ಟಿ
ಸೈಕೋಪಾತ್ ರೂಪದಲ್ಲಿ ರಾಜ್ ಬಿ ಶೆಟ್ಟಿ
ರೂಧಿರಂ ಟೀಸರ್ ಸೈಕೋಪಾತ್ ರೂಪದಲ್ಲಿ ರಾಜ್ ಬಿ ಶೆಟ್ಟಿ ಬೆಚ್ಚಿ ಬೀಳಿಸಿದ್ದಾರೆ ಕನ್ನಡದ ನಟ ಮತ್ತು ನಿರ್ದೇಶಕ ರಾಜ್ ಬಿ ಶೆಟ್ಟಿ ಮಾಲಿವುಡ್‌ನಲ್ಲಿ ಹೊಸ ಪರಿಚಯ ಮೂಡಿಸಿದ್ದಾರೆ. ಅವರ ಹೊಸ ಮಲಯಾಳಂ ಸಿನಿಮಾ "ರುಧಿರಂ" ಟೀಸರ್ ಇತ್ತೀಚೆಗಷ್ಟೆ ಬಿಡುಗಡೆಯಾಗಿ, ಪ್ರೇಕ್ಷಕರಲ್ಲಿ ಹೊಸ ಕೌತುಕ ಹುಟ್ಟಿಸಿದೆ. ಟೀಸರ್‌ನ ಮೊದಲ ದೃಶ್ಯದಲ್ಲಿ ರಾಜ್ ಬಿ ಶೆಟ್ಟಿಯ ಶಾಂತ ರೂಪ ಕಾಣಿಸಿಕೊಂಡರೂ, ನಂತರದ ದೃಶ್ಯಗಳಲ್ಲಿ ಕತ್ತರಿಯೊಂದಿಗೆ ಅಸಹಜ ನಗುವನ್ನು ತೋರಿಸುವ ಅವರ ನಟನೆ ಪ್ರೇಕ್ಷಕರಲ್ಲಿ ಸೈಕೋಪಾತ್ ಫೀಲ್ ಮೂಡಿಸುತ್ತದೆ. ಚಿತ್ರದಲ್ಲಿ ನಟಿ ಅಪರ್ಣಾ ಬಾಲಮುರಳಿ ಮತ್ತು ಒಂದು ನಾಯಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟೀಸರ್‌ನಲ್ಲಿ ಅಪರ್ಣಾ ಅವರ ಭಯಭೀತ ನಡೆ-ನುಡಿಗಳು ಕುತೂಹಲವನ್ನು ಹೆಚ್ಚಿಸುತ್ತವೆ. ಜಿಶೋ ಲೋನ್ ಆಂಟನಿ ನಿರ್ದೇಶಿಸಿರುವ "ರುಧಿರಂ" ಸಿನಿಮಾ, ಮಲಯಾಳಂ ಸೇರಿದಂತೆ ಇತರ ಭಾಷೆಗಳಲ್ಲಿ ಕೂಡ ಬಿಡುಗಡೆಯಾಗಲಿದೆ. ಟೀಸರ್‌ ಪ್ರಕಾರ, ಇದು ವಿಶಿಷ್ಟ ಥೀಮ್‌ ಹೊಂದಿದ ಭಿನ್ನ ಹಾದಿಯ ಚಿತ್ರವಾಗುವ ನಿರೀಕ್ಷೆ ಇದೆ. ಮತ್ತಷ್ಟು ವಿವರಗಳಿಗೆ ಟ್ರೈಲರ್‌ ಹೊರಬರುವುದಕ್ಕೆ ಕಾದು ನೋಡಬೇಕು.