Back to Top

ರೇಣುಕಾಸ್ವಾಮಿ ಪ್ರಕರಣ ದರ್ಶನ್​ಗೆ ದೊಡ್ಡ ಹಿನ್ನಡೆ, ಚಾರ್ಜ್​ಶೀಟ್​ನಲ್ಲಿ ಹೊಸ ಸತ್ಯಾಂಶ

SSTV Profile Logo SStv November 21, 2024
ರೇಣುಕಾಸ್ವಾಮಿ ಪ್ರಕರಣ ದರ್ಶನ್​ಗೆ ದೊಡ್ಡ ಹಿನ್ನಡೆ
ರೇಣುಕಾಸ್ವಾಮಿ ಪ್ರಕರಣ ದರ್ಶನ್​ಗೆ ದೊಡ್ಡ ಹಿನ್ನಡೆ
ರೇಣುಕಾಸ್ವಾಮಿ ಪ್ರಕರಣ ದರ್ಶನ್​ಗೆ ದೊಡ್ಡ ಹಿನ್ನಡೆ, ಚಾರ್ಜ್​ಶೀಟ್​ನಲ್ಲಿ ಹೊಸ ಸತ್ಯಾಂಶ ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್​​ಗೆ ಹೊಸದಾಗಿ ಸಲ್ಲಿಸಲು ರೆಡಿ ಮಾಡಿರುವ ಚಾರ್ಜ್​​ಶೀಟ್​ನಲ್ಲಿ ಮತ್ತಷ್ಟು ಪ್ರಮುಖ ಸತ್ಯಾಂಶಗಳು ಸೇರಿವೆ. ಇದರಿಂದ ಪ್ರಕರಣದ ಎಲ್ಲಾ ಆರೋಪಿಗಳಿಗೆ ಸಂಕಷ್ಟ ಹೆಚ್ಚಾಗುವ ಸಾಧ್ಯತೆ ಇದೆ. ಘಟನೆ ನಡೆದ ಶೆಡ್​​ನಲ್ಲಿನ ಸ್ಥಳದಲ್ಲಿ ಕ್ಲಿಕ್ ಮಾಡಿದ್ದ ಎರಡು ಮಹತ್ವದ ಫೋಟೋಗಳನ್ನು ಪೊಲೀಸರು ರಿಕವರಿ ಮಾಡಿದ್ದಾರೆ. ಈ ಫೋಟೋಗಳನ್ನು ಪ್ರತ್ಯಕ್ಷದರ್ಶಿ ಪುನೀತ್ ತಮ್ಮ ಮೊಬೈಲ್​​ನಿಂದ ಭಯದಿಂದ ಡಿಲೀಟ್ ಮಾಡಿದ್ದರೂ, ಪೊಲೀಸರು ಅವುಗಳನ್ನು ಪುನಃ ರಿಟ್ರೀವ್ ಮಾಡಿದ್ದಾರೆ. ಚಾರ್ಜ್​​ಶೀಟ್​​ನಲ್ಲಿರುವ ಈ ಫೋಟೋಗಳಲ್ಲಿ ನಟ ದರ್ಶನ್ ಬ್ಲೂ ಟೀ-ಶರ್ಟ್ ಮತ್ತು ಕಪ್ಪು ಜೀನ್ಸ್ ಧರಿಸಿಕೊಂಡು ಶೆಡ್​​ನಲ್ಲಿ ಇದ್ದ ದೃಶ್ಯಗಳು ಕಾಣಿಸಿವೆ. ಈ ಮಾಹಿತಿ ಪೊಲೀಸ್ ಮೂಲಗಳಿಂದ ಬಹಿರಂಗವಾಗಿದ್ದು, ನಟ ದರ್ಶನ್​​ಗೆ ಇದೊಂದು ದೊಡ್ಡ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.