ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕೇಸ್: ತನಿಖೆ ಚುರುಕು – ನಟ ಪ್ರಜ್ವಲ್ ದೇವರಾಜ್ ಕಿಡಿ!


ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣದಲ್ಲಿ ಬೆಂಗಳೂರು ಕ್ರೈಂ ಬ್ರ್ಯಾಂಚ್ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿ, ತನಿಖೆಗೆ ವೇಗ ನೀಡಿದ್ದಾರೆ. ಸುಮಾರು 48 ಸೋಷಿಯಲ್ ಮೀಡಿಯಾ ಖಾತೆಗಳ ವಿವರಗಳನ್ನು ನಟಿ ರಮ್ಯಾ ಪೊಲೀಸರಿಗೆ ನೀಡಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಪೊಲೀಸರು ಆರು ತಂಡಗಳೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದು, ಆರೋಪಿಗಳ ನಡುವೆ ಗಬ್ಬೆಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ ನಟ ಪ್ರಜ್ವಲ್ ದೇವರಾಜ್ ಪ್ರತಿಕ್ರಿಯೆ ನೀಡಿದ್ದಾರೆ. "ಸು ಫ್ರಮ್ ಸೋ ಸಿನಿಮಾವನ್ನ ವೀಕ್ಷಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪ್ರಜ್ವಲ್ ದೇವರಾಜ್ ಹೆಣ್ಣುಮಕ್ಕಳಿಗೆ ಕಿರುಕುಳ ನೀಡಬಾರದು ಅನ್ನೋ ಸಂದೇಶವನ್ನು ಹೊತ್ತಿದೆ. ಧೈರ್ಯ ಇದ್ದರೆ ಮುಂದೆ ಬಂದು ಮಾತನಾಡಲಿ. ಎಲ್ಲರ ಕೈಯಲ್ಲೂ ಮೊಬೈಲ್ ಇದ್ದರೆ ಅಂದ್ರೆ ಯಾರೂ ನೋಡಲ್ಲ ಅನ್ನೋ ಭಾವನೆಯಿಂದ ಕೆಟ್ಟ ಸಂದೇಶ ಕಳಿಸಬಾರದು," ಎಂದು ಹೇಳಿದ ಅವರು, ಎಲ್ಲ ಅಭಿಮಾನಿಗಳು ಜವಾಬ್ದಾರಿ ಯುತವಾಗಿ ವರ್ತಿಸಬೇಕೆಂದು ಹೇಳಿದ್ದಾರೆ.
ಇದರ ಮಧ್ಯೆ, ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿಯವರ ಸಹೋದರಿಗೆ ಅಪರಿಚಿತ ವ್ಯಕ್ತಿಯಿಂದ 280 ಬಾರಿ ಕರೆಗಳು, ಅಶ್ಲೀಲ ಸಂದೇಶ ಹಾಗೂ ಫೋಟೋಗಳು ಬಂದಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಕೂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಟ ಪ್ರಜ್ವಲ್ ಮುಂದಾಗಿದ್ದು, "ಅಂಥವರಿಗೆ ಕಾನೂನಾತ್ಮಕ ಪಾಠ ಕಲಿಸಬೇಕು," ಎಂದು ಹೇಳಿದ್ದಾರೆ.
Trending News
ಹೆಚ್ಚು ನೋಡಿವಿಷ್ಣುವರ್ಧನ್ ಸಿನಿಮಾಗೆ ಡೈರೆಕ್ಷನ್ ಕೊಡಬೇಕಿತ್ತಾ ರಮೇಶ್ ಅರವಿಂದ್? ಮಿಸ್ ಆದ ಆ ಅಪರೂಪದ ಅವಕಾಶ!

ಕಾಂತಾರಕ್ಕೆ ಕೈಜೋಡಿಸಿದ ಗಾಯಕ ದಿಲ್ಜಿತ್ ಸಿಂಗ್: ರಿಷಬ್ ಶೆಟ್ಟಿ ನಿಜಕ್ಕೂ ಮಾಸ್ಟರ್ಪೀಸ್ ಎಂದ ಸಿಂಗರ್
