Back to Top

ರಕ್ಷಿತಾ ಪ್ರೇಮ್ ಸಹೋದರ ರಾಣಾ ಎಂಗೇಜ್ಮೆಂಟ್

SSTV Profile Logo SStv November 21, 2024
ರಾಣಾ ಎಂಗೇಜ್ಮೆಂಟ್
ರಾಣಾ ಎಂಗೇಜ್ಮೆಂಟ್
ರಕ್ಷಿತಾ ಪ್ರೇಮ್ ಸಹೋದರ ರಾಣಾ ಎಂಗೇಜ್ಮೆಂಟ್ ನಟಿ ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ (ಅಭಿಷೇಕ್) ಅವರು ಕುಟುಂಬಸ್ಥರ ಸಮ್ಮುಖದಲ್ಲಿ ಸಿಂಪಲ್ ರೀತಿಯಲ್ಲಿ ನಿಶ್ಚಿತಾರ್ಥ ಮುಗಿಸಿಕೊಂಡಿದ್ದಾರೆ. ಈ ವಿಶೇಷ ಕ್ಷಣದ ಫೋಟೋಗಳು ಮತ್ತು ವಿಡಿಯೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.ರಾಣಾ ಹಾಗೂ ಅವರ ಭಾವಿ ಪತ್ನಿಯ ಜೋಡಿ ಹೇಳಿ ಮಾಡಿಸಿದಂತೆ ಕಾಣುತ್ತಿದ್ದು, ಫೋಟೋಗಳನ್ನು ನೋಡಿ ಅಭಿಮಾನಿಗಳು ಶುಭಾಶಯಗಳನ್ನು ಹಂಚುತ್ತಿದ್ದಾರೆ. ಈ ನಿಶ್ಚಿತಾರ್ಥದಲ್ಲಿ ರಕ್ಷಿತಾ ಪ್ರೇಮ್ ಉಪಸ್ಥಿತರಿದ್ದು, ಸ್ಮೈಲ್ ಕೊಡುತ್ತಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಆದರೆ ನಿರ್ದೇಶಕ ಪ್ರೇಮ್ ಹಾಜರಾಗದ ಕಾರಣ ಗಮನ ಸೆಳೆದಿದೆ.ಇನ್ನು ರಾಣಾ ಮದುವೆ ಯಾವಾಗ, ಎಲ್ಲಿ ನಡೆಯಲಿದೆ ಎಂಬುದರ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. "ಏಕ್ ಲವ್ ಯಾ" ಸಿನಿಮಾದ ಮೂಲಕ ಕನ್ನಡಿಗರಿಗೆ ಪರಿಚಿತರಾದ ರಾಣಾ, ತಮ್ಮ ಮೊದಲ ಸಿನಿಮಾದಲ್ಲಿಯೇ ಯಶಸ್ಸು ಗಳಿಸಿದ್ದರು. ಇದೀಗ ಕುಟುಂಬದಲ್ಲಿ ಹೊಸ ಸಂತೋಷ ತುಂಬಿದ್ದು, ಮುಂದೆ ನಡೆಯಲಿರುವ ಮದುವೆಗೂ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ ಶುಭವಾಗಲಿ ರಾಣಾ.