Back to Top

"ನಿಮ್ಮ ನಿಲುವು ಸರಿಯಿದೆ, ನಾವು ಜೊತೆಗಿದ್ದೀವಿ!" – ರಮ್ಯಾಗೆ ತಾಕತ್ತಿನ ಬೆಂಬಲ ನೀಡಿದ ಶಿವಣ್ಣ ದಂಪತಿ

SSTV Profile Logo SStv July 29, 2025
ರಮ್ಯಾಗೆ ತಾಕತ್ತಿನ ಬೆಂಬಲ ನೀಡಿದ ಶಿವಣ್ಣ ದಂಪತಿ
ರಮ್ಯಾಗೆ ತಾಕತ್ತಿನ ಬೆಂಬಲ ನೀಡಿದ ಶಿವಣ್ಣ ದಂಪತಿ

ದರ್ಶನ್ ಅಭಿಮಾನಿಗಳ ವಿರುದ್ಧ ರಮ್ಯಾ ಹೋರಾಟ ಆರಂಭಿಸಿದ ನಂತರ, ಅವರ ಪರವಾಗಿ ಬೆಂಬಲದ ಹೆಜ್ಜೆಗಳು ಹೆಚ್ಚಾಗಿವೆ. ಇದೀಗ ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ನಟ ಶಿವರಾಜ್‌ಕುಮಾರ್ ಮತ್ತು ಗೀತಾ ಶಿವರಾಜ್‌ಕುಮಾರ್ ರಮ್ಯಾ ಪರ ನಿಂತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ರಮ್ಯಾ ವಿರುದ್ಧ ಬಳಸಿರುವ ಅವಾಚ್ಯ ಪದಗಳನ್ನು ಖಂಡಿಸಿದ ಶಿವಣ್ಣ, “ಮಹಿಳೆಯರನ್ನು ತಾಯಿಯಾಗಿ, ಮಗಳಾಗಿ, ವ್ಯಕ್ತಿಯಾಗಿ ಗೌರವಿಸಬೇಕು. ಅವಮಾನ, ನಿಂದನೆ, ದ್ವೇಷ ಹರಡಬಾರದು” ಎಂದು ತಮ್ಮ ಪೋಸ್ಟ್‌ನಲ್ಲಿ ಹೇಳಿದರು.

“ನಿಮ್ಮ ನಿಲುವು ಸರಿಯಿದೆ. ನಾವು ಸದಾ ನಿಮ್ಮ ಜೊತೆ ನಿಲ್ಲುತ್ತೇವೆ” ಎಂದು ರಮ್ಯಾಗೆ ಧೈರ್ಯ ತುಂಬಿದ ಅವರು, ಸೋಶಿಯಲ್ ಮೀಡಿಯಾ ಒಂದು ಬಲಿಷ್ಠ ಅಸ್ತ್ರವಾಗಿದ್ದು, ಅದನ್ನು ನಕಾರಾತ್ಮಕವಾಗಿ ಬಳಸಬಾರದು ಎಂಬ ಸಂದೇಶವನ್ನೂ ನೀಡಿದ್ದಾರೆ.

ಈ ಬೆಂಬಲದ ಹಿನ್ನೆಲೆ, ರಮ್ಯಾ ಹೋರಾಟಕ್ಕೆ ಹೊಸ ತಾಕತ್ತು ನೀಡಿದ್ದು, ಸಮಾಜದಲ್ಲೂ ಮಹಿಳಾ ಗೌರವದ ಕುರಿತ ಚರ್ಚೆಗೆ ವಿಸ್ತಾರ ನೀಡಿದೆ.