Back to Top

ರಮ್ಯಾ ವಿರುದ್ಧ ದರ್ಶನ್ ಫ್ಯಾನ್ಸ್ ಕಿರುಕುಳ: ಕಾನೂನು ಹೋರಾಟಕ್ಕೆ ರಮ್ಯಾ ಸಿದ್ಧತೆ

SSTV Profile Logo SStv July 28, 2025
ರಮ್ಯಾ ವಿರುದ್ಧ ದರ್ಶನ್ ಫ್ಯಾನ್ಸ್ ಕಿರುಕುಳ
ರಮ್ಯಾ ವಿರುದ್ಧ ದರ್ಶನ್ ಫ್ಯಾನ್ಸ್ ಕಿರುಕುಳ

ಸ್ಯಾಂಡಲ್‌ವುಡ್ ನಟಿ ರಮ್ಯಾ ಇದೀಗ ದರ್ಶನ್ ಫ್ಯಾನ್ಸ್ ವಿರುದ್ಧ ಗರಂ ಆಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೃತರ ಕುಟುಂಬದ ಪರ ನಿಂತಿರುವ ರಮ್ಯಾಗೆ ದರ್ಶನ್ ಅಭಿಮಾನಿಗಳಿಂದ ಸೋಷಿಯಲ್ ಮೀಡಿಯಾದಲ್ಲಿ ನಿರಂತರ ಅಶ್ಲೀಲ ಸಂದೇಶಗಳು ಬರುತ್ತಿವೆ. ಈ ಎಲ್ಲಾ ಮೆಸೇಜ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರಮ್ಯಾ, ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ರಮ್ಯಾ, ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ, ದರ್ಶನ್ ಅಭಿಮಾನಿಗಳು ಹೆಣ್ಣುಮಕ್ಕಳನ್ನು ಅಪಮಾನಿಸುವ ಭಾಷೆ ಬಳಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಸುಧೀಪ್, ಯಶ್, ಅವರ ಕುಟುಂಬಗಳನ್ನೂ ಟೀಕಿಸಿದ್ದಾಗಿ ತಿಳಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ರಮ್ಯಾ, "ರೇಣುಕಾಸ್ವಾಮಿ ಮತ್ತು ಡಿ ಬಾಸ್ ಫ್ಯಾನ್ಸ್ ಸಂದೇಶಗಳಲ್ಲಿ ವ್ಯತ್ಯಾಸವೇ ಇಲ್ಲ. ಇಂಥ ಸ್ತ್ರೀದ್ವೇಷಿಗಳಿಂದಲೇ ಸಮಾಜದಲ್ಲಿ ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ" ಎಂದು ಭಾರೀ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಇದೇ ರೀತಿ ಮುಂದುವರೆದರೆ ಕಾನೂನು ರೀತಿಯಿಂದಲೇ ಎದುರಿಸುತ್ತೇನೆ ಎಂದು ರಮ್ಯಾ ಎಚ್ಚರಿಸಿದ್ದಾರೆ.