ರಮ್ಯಾಗೆ ಅಸಭ್ಯ ಸಂದೇಶ ಕಳಿಸಿದವರಿಗೂ, ಮಾಡಿಸಿದವರಿಗೂ ಶಿಕ್ಷೆ ಅಗಬೇಕು: ರಾಕ್‌ಲೈನ್ ವೆಂಕಟೇಶ್


ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಹಾಗೂ ನಟ ರಾಕ್‌ಲೈನ್ ವೆಂಕಟೇಶ್, ದರ್ಶನ್ ಅಭಿಮಾನಿಗಳಿಂದ ನಟಿ ರಮ್ಯಾ ಅವರಿಗೆ ಅಸಭ್ಯ ಸಂದೇಶ ಕಳಿಸುವ ಪ್ರಕರಣದ ಕುರಿತು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ರಮ್ಯಾ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ, ಚಿತ್ರರಂಗದ ಅನೇಕ ಗಣ್ಯರೂ ರಮ್ಯಾ ಪರ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ರಮ್ಯಾ ಅವರನ್ನು ಉದ್ದೇಶಿಸಿ ಕಳಿಸಲಾದ ಅಸಭ್ಯ ಹಾಗೂ ಲೈಂಗಿಕವಾಗಿ ಕಿರುಕುಳ ನೀಡುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಈ ಘಟನೆಯನ್ನು ದಯನೀಯ ಹಾಗೂ ಕಲಾತ್ಮಕ ಸಮಾಜಕ್ಕೆ ಅಪ್ಪಳಿಸುವ ಘಟನೆ ಎಂದಿದ್ದಾರೆ ರಾಕ್‌ಲೈನ್. “ರಮ್ಯಾ ಅವರ ವಿರುದ್ಧ ನಿಜವಾದ ಫ್ಯಾನ್ ಪೇಜ್‌ಗಳಿಂದ ಅಂತಹ ಸಂದೇಶ ಬಂದಿದ್ದರೆ, ಮಾಡಿದವರಿಗೂ ಹಾಗೂ ಅದನ್ನು ಪ್ರೇರೇಪಿಸಿದವರಿಗೂ ತಪ್ಪದೇ ಶಿಕ್ಷೆ ಆಗಬೇಕು. ಮನೆಗಳಲ್ಲಿ ಹೆಣ್ಮಕ್ಕಳಿರುವವರು ಬೇರೆ ಹೆಣ್ಮಕ್ಕಳನ್ನು ಬೈಯುವ ಮೊದಲು ತಮ್ಮ ಮನೆಯಲ್ಲಿ ಇರುವವರನ್ನು ಗೌರವಿಸಬೇಕು,” ಎಂದು ರಾಕ್‌ಲೈನ್ ಗುಡುಗಿದರು.
ಅವರು ಹೇಳಿದರು: “ನಾಳೆ ಯಾವುದೇ ಸ್ಟಾರ್ ನಟ ನಿಮ್ಮನ್ನು ರಕ್ಷಿಸಲು ಬಾರೋದಿಲ್ಲ. ನಾನು ಗಾಳಿಯಲ್ಲಿ ಮಾತಾಡೋ ಜನರ ಬಗ್ಗೆ ಪರಿಗಣನೆವನ್ನೂ ಮಾಡಲ್ಲ. ಎದುರಿಗೆ ನಿಂತು ಮಾತನಾಡಿದವರನ್ನು ಮಾತ್ರ ಗೌರವಿಸುತ್ತೇನೆ.” ಹೀಗೆ ಯಾವುದೇ ಹೀರೋನ ಹೆಸರು ಬಳಸಿ ಅಸಭ್ಯ ಸಂದೇಶ ಕಳುಹಿಸುವವರು ನಿಜವಾದ ಅಭಿಮಾನಿಗಳು ಅಲ್ಲ ಎಂದು ಬಿಂಬಿಸಿದ ಅವರು, “ನಿಜವಾದ ಅಭಿಮಾನಿಯಾಗಿದ್ದರೆ ನಿಮ್ಮ ಕೃತ್ಯಕ್ಕೆ ಜವಾಬ್ದಾರಿ ವಹಿಸಿ. ಗಂಡಸಿನ ಥರ ಎದುರಿಗೆ ಬಂದು ಒಪ್ಪಿಕೊಳ್ಳಿ. ರಮ್ಯಾ ಅವರ ಬಳಿ ಕ್ಷಮೆ ಯಾಚಿಸಿ, ಮುಂದೆ ತಪ್ಪು ಮಾಡಲ್ಲವೆಂದು ಭರವಸೆ ನೀಡಿರಿ” ಎಂದು ಸವಾಲು ಹಾಕಿದರು.
ಸೋಶಿಯಲ್ ಮೀಡಿಯಾವನ್ನು ಜವಾಬ್ದಾರಿಯಿಂದ ಬಳಸಿಕೊಳ್ಳಬೇಕು ಎಂದು ಅವರು ಎಚ್ಚರಿಸಿದರು. “ನಿಮ್ಮ ಮನೆಯಲ್ಲಿ ಯಾರಾದರೂ ಹೆಣ್ಣುಮಕ್ಕಳಿಗೆ ಇಂತಹವಾಗಿ ಬೈದ್ರೆ ಸುಮ್ಮನೆ ಇರುತ್ತೀರಾ? ಎಲ್ಲರಿಗೂ ಮನಸಾಕ್ಷಿ ಇದೆ, ಅದಕ್ಕೆ ಗೌರವವಿರಲಿ,” ಎಂದು ತಿಳಿಸಿದ್ದಾರೆ. ಚಿತ್ರರಂಗದ ಹಿರಿಯರು, ಕಲಾವಿದರ ಸಂಘ, ಹಾಗೂ ಸಾರ್ವಜನಿಕ ವ್ಯಕ್ತಿಗಳು ಈ ಪ್ರಕರಣದ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಒತ್ತಾಯಿಸಿದರು. “ಇದನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡವರು ಶಿಕ್ಷೆಗೆ ಗುರಿಯಾಗಲೇಬೇಕು,” ಎಂದು ಅವರು ಹೇಳಿದರು.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
