Back to Top

ರಾಮನಗರದಲ್ಲಿ ‘ಎಕ್ಕ’ ಚಿತ್ರತಂಡ – ಯುವ ರಾಜ್ ಕುಮಾರ್ ಮತ್ತು ಸಂಪದಾ ಅಭಿಮಾನಿಗಳ ಮನಸೆಳೆಯುವಲ್ಲಿ ಯಶಸ್ವಿ

SSTV Profile Logo SStv July 17, 2025
ರಾಮನಗರದಲ್ಲಿ ‘ಎಕ್ಕ’ ಚಿತ್ರತಂಡದ ಮಿಂಚು
ರಾಮನಗರದಲ್ಲಿ ‘ಎಕ್ಕ’ ಚಿತ್ರತಂಡದ ಮಿಂಚು

ರೋಹಿತ್ ಪದಕಿ ನಿರ್ದೇಶನದ ‘ಎಕ್ಕ’ ಸಿನಿಮಾ ನಾಳೆ (ಶುಕ್ರವಾರ) ರಾಜ್ಯದಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಚಾರಾರ್ಥ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸುತ್ತಿದ್ದು, ಇದೀಗ ರಾಮನಗರದಲ್ಲಿ ನಡೆದ ಕರಗ ಮಹೋತ್ಸವದಲ್ಲಿ ಭಾಗವಹಿಸಿತು.

ಚಿತ್ರದ ನಾಯಕ ಯುವ ರಾಜ್ ಕುಮಾರ್ ಮತ್ತು ನಾಯಕಿ ಸಂಪದಾ ಕರಗ ಉತ್ಸವದ ವೇದಿಕೆಯಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿ, ‘ಎಕ್ಕ’ ಚಿತ್ರವನ್ನು ನೋಡಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು. ಪ್ರಚಾರದ ಉಲ್ಲಾಸದ ನಡುವೆ ಇಬ್ಬರೂ ಕಿರು ನೃತ್ಯ ಪ್ರದರ್ಶನವೂ ನೀಡಿದರು.

ಈ ಸಂಧರ್ಭದಲ್ಲಿ ಮಾಜಿ ಸಂಸದ ಡಿಕೆ ಸುರೇಶ್ ಅವರು ಯುವ ರಾಜ್ ಕುಮಾರ್ ಮತ್ತು ಸಂಪದಾ ಅವರನ್ನು ಸನ್ಮಾನಿಸಿದರು. ಚಿತ್ರತಂಡದ ಈ ತೊಡಗಿಸಿಕೊಳ್ಳುವಿಕೆಯಿಂದಾಗಿ ‘ಎಕ್ಕ’ ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ‘ಎಕ್ಕ’ ಸಿನಿಮಾದಲ್ಲಿ ಯುವ ರಾಜ್ ಕುಮಾರ್, ಸಂಪದಾ, ಸಂಜನಾ ಸೇರಿದಂತೆ ಹಲವರು ಅಭಿನಯಿಸಿದ್ದು, ಚಿತ್ರ ಈ ವಾರದ ಬೃಹತ್ ಬಿಡುಗಡೆಗೆ ಸಜ್ಜಾಗಿದೆ.