Back to Top

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮನೆ ಮುಂದೆ ವಿಚಿತ್ರ ಪ್ರತಿಭಟನೆ

SSTV Profile Logo SStv November 29, 2024
ರಕ್ಷಿತ್ ಶೆಟ್ಟಿ ಮನೆ ಮುಂದೆ ವಿಚಿತ್ರ ಪ್ರತಿಭಟನೆ
ರಕ್ಷಿತ್ ಶೆಟ್ಟಿ ಮನೆ ಮುಂದೆ ವಿಚಿತ್ರ ಪ್ರತಿಭಟನೆ
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮನೆ ಮುಂದೆ ವಿಚಿತ್ರ ಪ್ರತಿಭಟನೆ ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ ಅವರ ಮನೆ ಮುಂದೆ ರಸ್ತೆ ದುರಸ್ಥಿಗಾಗಿ ಸ್ಥಳೀಯರು ವಿಚಿತ್ರ ಪ್ರತಿಭಟನೆ ನಡೆಸಿದ್ದು, ಈ ಘಟನೆ ಗಮನಸೆಳೆಯುತ್ತಿದೆ. ಉಡುಪಿ ಡಯಾನಾ-ಅಲೆವೂರು ರಸ್ತೆಯ ಕುಕ್ಕಿಕಟ್ಟೆಯಲ್ಲಿ ರಕ್ಷಿತ್ ಶೆಟ್ಟಿ ಅವರ ಮನೆ ಇದೆ. ಆದರೆ, ಈ ರಸ್ತೆಯ ಅವಸ್ಥೆ ತುಂಬಾ ಹದಗೆಟ್ಟಿದ್ದು, ಹೊಂಡ-ಗುಂಡಿ ತುಂಬಿಕೊಂಡಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಗತಿ ಕಂಡುಬರದ ಕಾರಣ, ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯ ವಿಶೇಷತೆ: ಹೊಂಡ-ಗುಂಡಿಗಳ ಮೇಲೆ "ರಸ್ತೆ ದುರಸ್ಥಿ ಪಡಿಸಿ" ಮತ್ತು "ಈ ರಸ್ತೆಯನ್ನ ಕಾಣದಷ್ಟು ಕುರುಡರಾದರೆ ರಾಜಕಾರಣಿಗಳು" ಎಂಬುದಾಗಿ ಬರೆದು, ತಮ್ಮ ಅಸಮಾಧಾನವನ್ನು ಪ್ರತಿಭಟನೆಯ ಮೂಲಕ ತೋರಿಸಿದ್ದಾರೆ. ಈ ವಿಚಿತ್ರ ಪ್ರತಿಭಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಇದೀಗ, ಈ ಘಟನೆಗೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರ ಬೇಡಿಕೆ.