Back to Top

"ಭಾರತದ ಬುದ್ಧಿವಂತ ನಿರ್ದೇಶಕರಿಗೆ ಸ್ಪೂರ್ತಿ ಉಪ್ಪಿ: ರಜನಿಕಾಂತ್ ಸ್ಟೇಜ್ ಮೇಲೆ ಮೆಚ್ಚುಗೆ"

SSTV Profile Logo SStv August 4, 2025
ರಜನಿಕಾಂತ್ ಸ್ಟೇಜ್ ಮೇಲೆ ಉಪ್ಪಿ ಬಗ್ಗೆ ಮೆಚ್ಚುಗೆ
ರಜನಿಕಾಂತ್ ಸ್ಟೇಜ್ ಮೇಲೆ ಉಪ್ಪಿ ಬಗ್ಗೆ ಮೆಚ್ಚುಗೆ

ಸೂಪರ್ ಸ್ಟಾರ್ ರಜನಿಕಾಂತ್‌ ಅವರ ಹೊಸ ಸಿನಿಮಾ ‘ಕೂಲಿ’ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಕುರಿತು ವಿಶೇಷವಾಗಿ ಮಾತನಾಡಿದ್ರು. ಉಪೇಂದ್ರ ಅವರು ಒಂದು ಬುದ್ಧಿವಂತ ನಿರ್ದೇಶಕರಾಗಿದ್ದು, ಇಂದಿನ ಭಾರತದ ಹಲವು ಟಾಪ್ ಡೈರೆಕ್ಟರ್‌ಗಳಿಗೆ ಸ್ಪೂರ್ತಿ ಎನ್ನುವಷ್ಟು ಮಟ್ಟಿಗೆ ಅವರ ದೃಷ್ಟಿಕೋಣ ವಿಶಿಷ್ಟವಾಗಿದೆ ಎಂದು ರಜನಿಕಾಂತ್ ಮೆಚ್ಚುಗೆ ವ್ಯಕ್ತಪಡಿಸಿದರು.

"ಲೀನಿಯರ್ ಮತ್ತು ನಾನ್ ಲೀನಿಯರ್ ಫಾರ್ಮಾಟ್‌ನಲ್ಲಿ ಇಂದು ಚಿತ್ರಗಳು ಬರುತ್ತಿವೆ. ಆದರೆ, ನಾನ್ ಲೀನಿಯರ್ ಚಿತ್ರಗಳನ್ನ ಉಪೇಂದ್ರ ಅವರು ಬಹಳ ಹಿಂದೆ ಮಾಡಿದ್ದಾರೇ" ಎಂದು ಹೇಳಿ, ಅವರ ಸಂಸ್ಕಾರಿತ ಚಿಂತನೆಗೆ ಶ್ಲಾಘನೆ ಸಲ್ಲಿಸಿದರು.

‘ಕೂಲಿ’ ಚಿತ್ರದ ಮೂಲಕ ರಜನಿಕಾಂತ್‌ ಮತ್ತು ಉಪೇಂದ್ರ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟ್ರೈಲರ್‌ನಲ್ಲಿ ಇವರ ದೃಶ್ಯಗಳು ಪ್ರತ್ಯೇಕವಾಗಿದ್ದರೂ, ಒಟ್ಟಿಗೆ ಕೆಲಸ ಮಾಡುತ್ತಿರುವುದು ಸಿನಿಮಾ ಪ್ರೇಮಿಗಳಿಗೆ ಖುಷಿ ನೀಡಿದ ಸಂಗತಿ.

ರಜನಿಕಾಂತ್ ಅವರ ಉಪೇಂದ್ರ ಬಗ್ಗೆ ಮಾಡಿದ ಈ ಕಾಮೆಂಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಹರ್ಷಕ್ಕೆ ಕಾರಣವಾಗಿದೆ.