Back to Top

'ಸು ಫ್ರಮ್ ಸೋ' ಓವರ್ ಹೈಪ್ ಅಂತಿದ್ರು? ರಾಜ್ ಬಿ. ಶೆಟ್ಟಿ ಕೊಟ್ಟ ಖಡಕ್ ಉತ್ತರ!

SSTV Profile Logo SStv August 2, 2025
ರಾಜ್ ಬಿ. ಶೆಟ್ಟಿ ಕೊಟ್ಟ ಖಡಕ್ ಉತ್ತರ
ರಾಜ್ ಬಿ. ಶೆಟ್ಟಿ ಕೊಟ್ಟ ಖಡಕ್ ಉತ್ತರ

ರಾಜ್ ಬಿ. ಶೆಟ್ಟಿ ನಿರ್ದೇಶನದ 'ಸು ಫ್ರಮ್ ಸೋ' ಸಿನಿಮಾ ಭಾರೀ ಯಶಸ್ಸು ಕಂಡಿದ್ದು, 50 ಕೋಟಿ ರೂ. ಬಾಕ್ಸ್ ಆಫೀಸ್ ಗಳಿಕೆಗೆ ಮುನ್ನಡೆದುಕೊಂಡಿದೆ. ಆದರೆ ಕೆಲವರು ಈ ಚಿತ್ರವನ್ನು "ಓವರ್ ಹೈಪ್ಡ್" ಎಂದು ಕರೆದಿದ್ದಾರೆ. ಇದಕ್ಕೆ ರಾಜ್ ಬಿ. ಶೆಟ್ಟಿ ಖಡಕ್ ಉತ್ತರ ನೀಡಿದ್ದು, “ನಾವು ಸುಳ್ಳು ಹೇಳಿಲ್ಲ, ಸಿನೆಮಾದ ಇಂಟೆನ್ಶನ್ ಜನರ ಮುಂದೆ ಇಟ್ಟಿದ್ದೇವೆ” ಎಂದಿದ್ದಾರೆ.

"ಬಸಳೆ ಸೊಪ್ಪನ್ನು ಬಸಳೆ ತಿನ್ನುವವರಿಗೆ ಮಾರಬೇಕು" ಎಂಬ ಉದಾಹರಣೆ ನೀಡಿ, ಪ್ರತಿ ಸಿನಿಮಾಕೂ ತನ್ನದೇ ಆದ ಪ್ರೇಕ್ಷಕರು ಇದ್ದಾರೆ ಎಂದು ತಿಳಿಸಿದರು. ಪೇಡ್ ಪ್ರೋಮೋಶನ್ ಮಾಡದೆ ಜನರ ಮಾತು ಮೂಲಕವೇ ಸಿನೆಮಾವನ್ನು ತಲುಪಿಸಲು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ ರಾಜ್.

"ಸು ಫ್ರಮ್ ಸೋ"ಗೆ ಈಗಾಗಲೇ 40 ಸಾವಿರಕ್ಕೂ ಅಧಿಕ ಮಂದಿ ರೇಟಿಂಗ್ ನೀಡಿ 9.5 ಮೊತ್ತ ನೀಡಿದ್ದು, ಇದು ಇತ್ತೀಚಿನ ದಿನಗಳಲ್ಲಿನ ಅಪೂರ್ವ ಸಾಧನೆ.