ಮ್ಯಾಕ್ಸ್ ಟ್ರೇಲರ್ ರಗ್ಡ್ ಲುಕ್ನಲ್ಲಿ ಮಾಸ್ ಆಗಿ ಕಾಣಿಸಿಕೊಂಡ ಕಿಚ್ಚ ಸುದೀಪ್


ಮ್ಯಾಕ್ಸ್ ಟ್ರೇಲರ್ ರಗ್ಡ್ ಲುಕ್ನಲ್ಲಿ ಮಾಸ್ ಆಗಿ ಕಾಣಿಸಿಕೊಂಡ ಕಿಚ್ಚ ಸುದೀಪ್ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ‘ಮ್ಯಾಕ್ಸ್’ ಸಿನಿಮಾದ ಟ್ರೇಲರ್ ಡಿಸೆಂಬರ್ 22ರಂದು ಬಿಡುಗಡೆಯಾಗಿದೆ. ಸುದೀಪ್ ರಗ್ಡ್ ಲುಕ್ನಲ್ಲಿ ಮಾಸ್ ಅಫೀಲ್ನೊಂದಿಗೆ ಪ್ರೇಕ್ಷಕರಿಗೆ ಭರ್ಜರಿ ಭರವಸೆ ನೀಡಿದ್ದಾರೆ. ಡಿಸೆಂಬರ್ 25ರಂದು ಸಿನಿಮಾ ಬಿಡುಗಡೆಗೊಳ್ಳಲಿದ್ದು, ಅಕ್ಷನ್ ಪ್ರಿಯರಿಗಾಗಿ ಪಕ್ಕಾ ಮನರಂಜನೆಯ ಫುಲ್ ಮೀಲ್ಸ್ ಸಿದ್ಧವಾಗಿದೆ.
ಈ ಚಿತ್ರದಲ್ಲಿ ಹೀರೋಯಿನ್ ಇಲ್ಲದಿದ್ದರೂ ಸುದೀಪ್ ಅವರ ಡೈಲಾಗ್ ಡೆಲಿವರಿ ಮತ್ತು ಅಕ್ಷನ್ ದೃಶ್ಯಗಳು ಅಭಿಮಾನಿಗಳನ್ನು ಮೆಚ್ಚಿಸಿವೆ. 'ಮ್ಯಾಕ್ಸ್' ಒಂದೇ ರಾತ್ರಿಯಲ್ಲಿರುವ ಉತ್ಕಂಠೆಯ ಕಹಾನಿಯನ್ನು ಹೊಂದಿದ್ದು, ಸುದೀಪ್ ನಟನೆಯ ವಿಕ್ರಾಂತ್ ರೋಣ ನಂತರ ಬಾವುನಿರೀಕ್ಷಿತ ಸಿನಿಮಾ ಆಗಿದೆ.
ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಉಗ್ರಂ ಮಂಜು, ಶರತ್ ಲೋಹಿತಾಶ್ವ, ವರಲಕ್ಷ್ಮಿ ಶರತ್ ಕುಮಾರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಂಗೀತವನ್ನು ಅಜನೀಶ್ ಬಿ. ಲೋಕನಾಥ್ ನೀಡಿದ್ದು, ಟ್ರೇಲರ್ ಮತ್ತು ಹಾಡುಗಳು ಈಗಾಗಲೇ ಹಿಟ್ ಆಗಿವೆ.
ಮಹಾಬಲಿಪುರಂನಲ್ಲಿ ಚಿತ್ರದ ಬಹುತೇಕ ಭಾಗವನ್ನು ಶೂಟ್ ಮಾಡಲಾಗಿದ್ದು, ಕಲೈಪುಲಿ ಎಸ್. ಧಾನು ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಭಿಮಾನಿಗಳು ಈಗ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಕುರಿತಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
