ರಚಿತಾಗೆ ಬಂಗಾರದ ನೆಕ್ಲೆಸ್ ಗಿಫ್ಟ್ ಮಾಡಿದ್ನಾ ಬಿಕ್ಲು ಶಿವ ಕೊಲೆ ಆರೋಪಿ? ರಚಿತಾ ರಾಮ್ ಜೊತೆಗೆ ಫೋಟೋ ವೈರಲ್!


ರಾಜ್ಯವನ್ನು ಬೆಚ್ಚಿಬಿಸುಮಾಡಿರುವ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಇದೀಗ ನಟಿ ರಚಿತಾ ರಾಮ್ ಹೆಸರು ಹೈಲೈಟ್ ಆಗಿದ್ದು, ಮತ್ತೆ ಸಂಚಲನ ಮೂಡಿಸಿದೆ. ಕೊಲೆಯ ಪ್ರಮುಖ ಆರೋಪಿ ಜಗ್ಗ ಅಲಿಯಾಸ್ ಜಗದೀಶ್ ಅವರು ಸಿನಿಮಾ ಕ್ಷೇತ್ರದ ಹಲವು ಸೆಲೆಬ್ರಿಟಿಗಳಿಗೆ ಪರಿಚಿತರಾಗಿದ್ದರೆಂಬ ಮಾಹಿತಿ ಹೊರಬಿದ್ದಿದೆ.
ರಚಿತಾ ರಾಮ್‌ಗೆ ಬಂಗಾರದ ನೆಕ್ಲೆಸ್ ಹಾಗೂ ಸೀರೆ ಉಡುಗೊರೆಯಾಗಿ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಶೂಟಿಂಗ್ ವೇಳೆ ತೆಗೆದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಈಗ ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ.
ಜಗ್ಗ ರಾಜಕೀಯ ಸಂಪರ್ಕ ಹೊಂದಿದ್ದು, ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಲಾಭ ಗಳಿಸುತ್ತಿದ್ದ ಎಂದು ತಿಳಿದು ಬಂದಿದೆ. ಮಾಜಿ ರೌಡಿಶೀಟರ್ ಆಗಿದ್ದ ಜಗ್ಗನಿಗೆ ಸ್ಯಾಂಡಲ್‌ವುಡ್‌ಗೂ ನಂಟು ಇದ್ದ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದರಿಂದಾಗಿ ಈ ಪ್ರಕರಣ ಇನ್ನಷ್ಟು ಕುತೂಹಲದ ಕೇಂದ್ರಬಿಂದುವಾಗಿ ಪರಿಣಮಿಸಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
