Back to Top

ಪುಷ್ಪ 2 ಶ್ರೀಲೀಲಾ ಫ್ಯಾನ್ಸ್‌ಗೆ ಗಿಫ್ಟ್ ಐಟಂ ಸಾಂಗ್ ನ.24ಕ್ಕೆ ರಿಲೀಸ್

SSTV Profile Logo SStv November 22, 2024
ಪುಷ್ಪ 2 ಶ್ರೀಲೀಲಾ ಫ್ಯಾನ್ಸ್‌ಗೆ ಗಿಫ್ಟ್
ಪುಷ್ಪ 2 ಶ್ರೀಲೀಲಾ ಫ್ಯಾನ್ಸ್‌ಗೆ ಗಿಫ್ಟ್
ಪುಷ್ಪ 2 ಶ್ರೀಲೀಲಾ ಫ್ಯಾನ್ಸ್‌ಗೆ ಗಿಫ್ಟ್ ಐಟಂ ಸಾಂಗ್ ನ.24ಕ್ಕೆ ರಿಲೀಸ್ ‘ಪುಷ್ಪ 2’ ಸಿನಿಮಾ ಕನ್ನಡದ ನಟಿ ಶ್ರೀಲೀಲಾ ಹಾಗೂ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಜೋಡಿಯ ಐಟಂ ಸಾಂಗ್‌ಗಾಗಿ ಪ್ರೇಕ್ಷಕರಿಗೆ ತೀವ್ರ ನಿರೀಕ್ಷೆ. ಶ್ರೀಲೀಲಾ ಈ ಹಾಡಿಗೆ ಹೆಜ್ಜೆ ಹಾಕಿದ ಸುದ್ದಿ ಈಗಾಗಲೇ ವೈರಲ್ ಆಗಿದ್ದು, ಈ ‘ಕಿಸ್ಸಿಕ್’ ಹಾಡು ನ.24ರಂದು ಸಂಜೆ 7:02ಕ್ಕೆ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ನಿರ್ಮಾಣ ಸಂಸ್ಥೆಯ ಈ ಅನೌನ್ಸ್‌ಮೆಂಟ್‌ ಭರಪೂರ ನಿರೀಕ್ಷೆ ಹುಟ್ಟುಹಾಕಿದ್ದು, ಶ್ರೀಲೀಲಾ ಅವರ ಹೊಸ ಲುಕ್‌ ಸಹ ಪ್ರೇಕ್ಷಕರನ್ನು ಕಣ್ತುಂಬಿಸಿದೆ. ಪುಷ್ಪ 2 ಸಿನಿಮಾದ ಈ ಹಾಡು ಪಡ್ಡೆಹುಡುಗರ ಮನಸೆಳೆಯಲು ಸಿದ್ಧವಾಗಿದೆ. ಚಿತ್ರವನ್ನು ಡಿ.5ರಂದು ತೆರೆಗೆ ತರುವ ಯೋಜನೆ ಇರಲಾಗಿದ್ದು, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಧನಂಜಯ, ಫಹಾದ್ ಫಾಸಿಲ್ ಸೇರಿದಂತೆ ಪ್ರಮುಖ ಕಲಾವಿದರ ಅಭಿನಯದಿಂದ ಚಿತ್ರ ಮತ್ತಷ್ಟು ಆಕರ್ಷಕವಾಗಲಿದೆ.