Back to Top

‘ಪುಷ್ಪ 2’ ಒಟಿಟಿ ಬಿಡುಗಡೆ ಬಗ್ಗೆ ಸ್ಪಷ್ಟನೆ ನೀಡಿದ ನಿರ್ಮಾಪಕರು

SSTV Profile Logo SStv December 21, 2024
‘ಪುಷ್ಪ 2’ ಒಟಿಟಿ ಬಿಡುಗಡೆ
‘ಪುಷ್ಪ 2’ ಒಟಿಟಿ ಬಿಡುಗಡೆ
‘ಪುಷ್ಪ 2’ ಒಟಿಟಿ ಬಿಡುಗಡೆ ಬಗ್ಗೆ ಸ್ಪಷ್ಟನೆ ನೀಡಿದ ನಿರ್ಮಾಪಕರು ಅಲ್ಲು ಅರ್ಜುನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಪುಷ್ಪ 2’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಸಿನಿಮಾ 15 ದಿನಗಳ ನಂತರವೂ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಒಟಿಟಿ ಬಿಡುಗಡೆ ಬಗ್ಗೆ ಸಾಕಷ್ಟು ಗಾಳಿ ಸುದ್ದಿಗಳು ಹರಿದಾಡುತ್ತಿದ್ದು, ಈ ಬಗ್ಗೆ ನಿರ್ಮಾಪಕರು ಸ್ಪಷ್ಟನೆ ನೀಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ತಮ್ಮ ಟ್ವೀಟ್‌ನಲ್ಲಿ, “‘ಪುಷ್ಪ 2’ ಸಿನಿಮಾ ಕನಿಷ್ಠ 56 ದಿನಗಳ ವರೆಗೆ ಯಾವುದೇ ಒಟಿಟಿ ವೇದಿಕೆಗೆ ಬರಲಿಲ್ಲ. ಹಬ್ಬದ ಸೀಸನ್‌ನಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಭೇಟಿ ನೀಡಿ ಸಿನಿಮಾ ವೀಕ್ಷಿಸಬೇಕು” ಎಂದು ತಿಳಿಸಿದ್ದಾರೆ. ಇದರಿಂದಾಗಿ ‘ಪುಷ್ಪ 2’ ಸಿನಿಮಾ ಫೆಬ್ರವರಿ ಮೊದಲ ವಾರದವರೆಗೆ ಒಟಿಟಿಯಲ್ಲಿ ಲಭ್ಯವಾಗದಿರುವುದು ಖಾತ್ರಿಯಾಗಿದೆ. ಒಟಿಟಿ ಹಕ್ಕುಗಳು ಈಗಾಗಲೇ ನೆಟ್‌ಫ್ಲಿಕ್ಸ್ ಮತ್ತು ಜೀ5ಗೆ ಮಾರಾಟಗೊಂಡಿದ್ದು, ಪ್ರೇಕ್ಷಕರು ಫೆಬ್ರವರಿ ತಿಂಗಳಲ್ಲಿ ಈ ಚಿತ್ರವನ್ನು ಒಟಿಟಿಯಲ್ಲಿ ವೀಕ್ಷಿಸಬಹುದಾಗಿದೆ.