Back to Top

‘ಪುಷ್ಪಾ 2’ ಐಟಂ ಹಾಡಿಗೆ ಶ್ರೀಲೀಲಾ ಸೊಂಟ ಬಳುಕಿಸಿದ್ದು ಪಕ್ಕಾ

SSTV Profile Logo SStv November 9, 2024
‘ಪುಷ್ಪಾ 2’ ಐಟಂ ಹಾಡಿಗೆ ಶ್ರೀಲೀಲಾ
‘ಪುಷ್ಪಾ 2’ ಐಟಂ ಹಾಡಿಗೆ ಶ್ರೀಲೀಲಾ
‘ಪುಷ್ಪಾ 2’ ಐಟಂ ಹಾಡಿಗೆ ಶ್ರೀಲೀಲಾ ಸೊಂಟ ಬಳುಕಿಸಿದ್ದು ಪಕ್ಕಾ ಪ್ಯಾನ್ ಇಂಡಿಯಾ ಸಿನಿಮಾದಾದ ‘ಪುಷ್ಪಾ 2’ ಡಿಸೆಂಬರ್ 6ರಂದು ಬಿಡುಗಡೆಗೊಳ್ಳಲಿದ್ದು, ಪ್ರೇಕ್ಷಕರಲ್ಲಿ ಈ ಬಾರಿ ಹೆಚ್ಚಿರುವ ಕುತೂಹಲದ ವಿಷಯವೇ ಐಟಂ ಹಾಡು. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ, ಕನ್ನಡದ ಜನಪ್ರಿಯ ನಟಿ ಶ್ರೀಲೀಲಾ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ ಎಂಬ ಸುದ್ದಿಯು ಇದೀಗ ದೃಢಪಟ್ಟಿದೆ. ಹಿಂದೆ ಈ ಹಾಡಿಗೆ ಶ್ರದ್ಧಾ ಕಪೂರ್, ಜಾನ್ವಿ ಕಪೂರ್, ತೃಪ್ತಿ ದಿಮ್ರಿ ಸೇರಿದಂತೆ ಹಲವು ನಟಿಯರ ಹೆಸರಗಳು ಕೇಳಿಬಂದಿದ್ದರೂ, ಕೊನೆಗೆ ಶ್ರೀಲೀಲಾ ಆಯ್ಕೆಯಾದ್ದರಿಂದ ಕನ್ನಡ ಪ್ರೇಕ್ಷಕರಲ್ಲಿ ಕೂಡ ಸಂತೋಷ ಮೂಡಿದೆ. 'ಪುಷ್ಪ 1'ರಲ್ಲಿ ಸಮಂತಾ ಐಕಾನಿಕ್ ಸಾಂಗ್‌ ಮಾಡಿದ್ದಂತೆ, ಈ ಬಾರಿಗೆ ಶ್ರೀಲೀಲಾ ಅವರ ಸಂಜೋಗ ದೆಸೆದೇ ಆಯ್ಕೆಯಾಗಿದ್ದಾರೆ. ಈ ಹಾಡಿನ ಫೋಟೋ ಈಗಾಗಲೇ ಲೀಕ್ ಆಗಿದ್ದು, ಸದ್ಯ ಚಿತ್ರೀಕರಣವೂ ಮುಗಿದಿದೆ. ‘ಪುಷ್ಪಾ 2’ ಐಟಂ ಹಾಡು ಎಲ್ಲರ ಗಮನ ಸೆಳೆಯುವ ನಿರೀಕ್ಷೆಯಲ್ಲಿದ್ದು, ಚಿತ್ರ ಬಿಡುಗಡೆಯ ಮುನ್ನವೇ ಹೈಪ್‌ ಕ್ರಿಯೇಟ್‌ ಮಾಡಿದೆ. ಪ್ರೇಕ್ಷಕರು ಈಗ ಶ್ರೀಲೀಲಾ ಅವರ ಅದ್ಭುತ ನೃತ್ಯ ಪ್ರದರ್ಶನವನ್ನು ಕಾದು ನೋಡುತ್ತಿದ್ದಾರೆ.