'ಹರಿ ಹರ ವೀರ ಮಲ್ಲು'ಗೂ ಟಫ್ ಕಾಂಪಿಟೇಷನ್ ನೀಡುತ್ತಿರುವ 'ಸು ಫ್ರಮ್ ಸೋ': ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ದಾಖಲೆ


ಬಹುತೇಕ ಹೊಸ ಮುಖಗಳಿಂದ ನಿರ್ಮಿತವಾದ ಹಾರರ್ ಕಾಮಿಡಿ ಸಿನಿಮಾ ‘ಸು ಫ್ರಮ್ ಸೋ’ ಕನ್ನಡ ಚಿತ್ರರಂಗದಲ್ಲಿ ಭಾರೀ ಸಂಚಲನ ಮೂಡಿಸಿದೆ. ಜೆ.ಪಿ. ತುಮಿನಾಡು ನಿರ್ದೇಶನದ ಈ ಸಿನಿಮಾ, ಮೊದಲ ದಿನ ₹88 ಲಕ್ಷ, ಎರಡನೇ ದಿನ ₹2.44 ಕೋಟಿ ಕಲೆಕ್ಷನ್ ಮಾಡಿ ಒಟ್ಟು ₹3.32 ಕೋಟಿ ರೂ. ಗಳಿಸಿದೆ.
ಜನರ ಬಾಯ್ಮಾತಿನ ಪ್ರಚಾರದ ಪರಿಣಾಮವಾಗಿ ಪ್ರತಿ ದಿನವೂ ಶೋಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಭಾನುವಾರ (ಜುಲೈ 27) ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಬೆಳಗ್ಗೆ 6.30 ರಿಂದಲೇ ಮಲ್ಟಿಪ್ಲೆಕ್ಸ್‌ಗಳಲ್ಲಿ ಶೋಗಳು ಆರಂಭವಾಗಿ, ಸಿನಿಮಾ ನೋಡಿ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಇದೇ ತಕ್ಷಣದ ಯಶಸ್ಸಿನ ಹಿನ್ನಲೆಯಲ್ಲಿ, 'ಸು ಫ್ರಮ್ ಸೋ' ಮೊದಲ ವೀಕೆಂಡ್‌ನಲ್ಲಿ 7-8 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕನ್ನಡದೊಂದಿಗೆ ಶೀಘ್ರದಲ್ಲೇ ಮಲಯಾಳಂ ಭಾಷೆಯಲ್ಲೂ ಬಿಡುಗಡೆ ಆಗಲಿದ್ದು, ದುಲ್ಕರ್ ಸಲ್ಮಾನ್ ಕೇರಳದಲ್ಲಿ ವಿತರಕರಾಗಿ ಚಿತ್ರವನ್ನು ಪರಿಚಯಿಸುತ್ತಿದ್ದಾರೆ.
ತೆಲುಗಿನ 'ಹರಿ ಹರ ವೀರ ಮಲ್ಲು' ಸಿನಿಮಾಗೆ ಪೈಪೋಟಿ ನೀಡುತ್ತಿರುವ ಈ ಚಿತ್ರ, ಬಹುಭಾಷಾ ಮಟ್ಟದಲ್ಲೂ ಧೂಮು ಹಬ್ಬಿಸುತ್ತಿದೆ. ‘ಸು ಫ್ರಮ್ ಸೋ’ ಈಗ ಸ್ಯಾಂಡಲ್‌ವುಡ್‌ನ ಹೊಸ ಯಶಸ್ಸಿನ ಹೆಜ್ಜೆ ಗುರುತು ಬರೆದಂತಾಗಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
