ಹೇ.. ಬಾಯ್ಬಿಟ್ರೆ ಹುಷಾರ್ ಪ್ರಮುಖ ಸಾಕ್ಷಿಗೆ ಬೆದರಿಕೆ ಹಾಕಿ ತಗ್ಲಾಕೊಂಡ ದರ್ಶನ್ ಬಾಡಿಗಾರ್ಡ್


ಹೇ.. ಬಾಯ್ಬಿಟ್ರೆ ಹುಷಾರ್ ಪ್ರಮುಖ ಸಾಕ್ಷಿಗೆ ಬೆದರಿಕೆ ಹಾಕಿ ತಗ್ಲಾಕೊಂಡ ದರ್ಶನ್ ಬಾಡಿಗಾರ್ಡ್ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಮತ್ತೆ ಹೊಸ ಬೆಳವಣಿಗೆಯೊಂದು ನಡೆದಿದೆ. ದರ್ಶನ್ ಗ್ಯಾಂಗ್ ಡಿಲೀಟ್ ಮಾಡಿದ ಫೋಟೋಗಳನ್ನು ಪೊಲೀಸರು ರಿಟ್ರೀವ್ ಮಾಡಿದ್ದು, ಈಗ ದರ್ಶನ್ ಬಾಡಿಗಾರ್ಡ್ ನಾಗೇಶ್ ಸ್ಫೋಟಕ ಆರೋಪಗಳಿಗೆ ಗುರಿಯಾಗಿದ್ದಾರೆ.
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಪ್ರಮುಖ ಸಾಕ್ಷಿಗೆ ನಾಗೇಶ್ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ದಾಖಲಾಗಿದೆ. ಕರ್ತವ್ಯದಿಂದ ಬಿಸಾಡಿದ ಬಟ್ಟೆಗಳನ್ನು ಗೈರುಮಾಡಲು ಬಾಯಿಬಿಟ್ಟರೆ ಸುಮ್ಮನೆ ಬಿಡಲ್ಲ ಎಂದು ಸಾಕ್ಷಿಗೆ ಬೆದರಿಕೆ ಹಾಕಿದ ಘಟನೆ ವರದಿಯಾಗಿದೆ.
ಈ ಸಂಬಂಧ ಎನ್‌ಸಿಆರ್ ದಾಖಲಾಗಿದ್ದು, ನಾಗೇಶ್ ಅವರನ್ನು ಕರೆಸಿ ವಿಚಾರಣೆ ನಡೆಸಿದ ಪೊಲೀಸರು, ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಪೊಲೀಸರು 2ನೇ ಚಾರ್ಜ್‌ಶೀಟ್ ಸಿದ್ಧಪಡಿಸುತ್ತಿರುವ ಈ ಸಂದರ್ಭದಲ್ಲಿ ಈ ಬೆಳವಣಿಗೆ ಪ್ರಕರಣವನ್ನು ಮತ್ತಷ್ಟು ಗಂಭೀರವಾಗಿಸಿದೆ.
ಇದರ ಬೆನ್ನಲ್ಲೇ, ರೇಣುಕಾಸ್ವಾಮಿ ಪ್ರಕರಣದಲ್ಲಿ ಸಾಕ್ಷಿ ನಾಶಕ್ಕೆ ದರ್ಶನ್ ಗ್ಯಾಂಗ್ ಮಾಡಿದ ಹುನ್ನಾರ ಬೆಳಕಿಗೆ ಬರುತ್ತಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
