Back to Top

‘ಸಿಂಗಾರ ಸಿರಿಯೇ’ ಖ್ಯಾತಿಯ ಪ್ರಮೋದ್ ಮರವಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು

SSTV Profile Logo SStv December 6, 2024
ಪ್ರಮೋದ್ ಮರವಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು
ಪ್ರಮೋದ್ ಮರವಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು
‘ಸಿಂಗಾರ ಸಿರಿಯೇ’ ಖ್ಯಾತಿಯ ಪ್ರಮೋದ್ ಮರವಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ‘ಕಾಂತಾರ’ ಚಿತ್ರದ ‘ಸಿಂಗಾರ ಸಿರಿಯೇ’ ಹಾಡಿನ ಸಾಹಿತಿ ಪ್ರಮೋದ್ ಮರವಂತೆ ಡಿ.5ರಂದು ಸಿಂಗರ್ ಸುಚೇತ ಬಸ್ರೂರಿನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಂದಾಪುರದಲ್ಲಿ ನಡೆದ ಅದ್ಧೂರಿ ಮದುವೆ ಸಮಾರಂಭದಲ್ಲಿ ಕುಟುಂಬಸ್ಥರು ಮತ್ತು ಸ್ನೇಹಿತರು ಪಾಲ್ಗೊಂಡರು. ಸುಚೇತ, ಕೆಜಿಎಫ್ 2 ಚಿತ್ರದ ‘ಗಗನ ನೀ ಭುವನ ನೀ’ ಹಾಡಿನ ಮೂಲಕ ಜನಪ್ರಿಯರಾದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರಿನ ಸೊಸೆಯಾಗಿದ್ದಾರೆ. ಮದುವೆಗೂ ಮುನ್ನ, ಪ್ರಮೋದ್ ಸಾಮಾಜಿಕ ಜಾಲತಾಣದಲ್ಲಿ "ರಾಗಕ್ಕೆ ಪದ ಸೇರಿದೆ, ಬದುಕೊಂದು ಹಾಡಾಗಿದೆ" ಎಂಬ ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡಿದ್ದರು. ಪ್ರಮೋದ್ ತನ್ನ ಗಾಯಕಿ ಪತ್ನಿಯೊಂದಿಗೆ ಹೊಸ ಜೀವನ ಆರಂಭಿಸುತ್ತಿದ್ದು, ‘ಸಿಂಗಾರ ಸಿರಿಯೇ’, ‘ಚೆಂದ ಚೆಂದ ನನ್ನ ಹೆಂಡ್ತಿ’, ಮತ್ತು ‘ಸೀತಾರಾಮ’ ಸೀರಿಯಲ್ ಟೈಟಲ್ ಟ್ರ್ಯಾಕ್ ಸೇರಿದಂತೆ ಅನೇಕ ಹಿಟ್‌ ಹಾಡುಗಳಿಗೆ ಸಾಹಿತ್ಯ ಬರೆದು ಹೆಸರು ಮಾಡಿದವರು. ಈ ಕಲಾತ್ಮಕ ಜೋಡಿಗೆ ಶುಭ ಹಾರೈಕೆಗಳು.