Back to Top

ಪ್ರಕಾಶ್ ರಾಜ್ ಇಡಿ ವಿಚಾರಣೆಗೆ ಹಾಜರ್: ಬೆಟ್ಟಿಂಗ್ ಆ್ಯಪ್ ಹಗರಣದಲ್ಲಿ ತಲೆ ಎತ್ತಿದ ಹೊಸ ಟ್ವಿಸ್ಟ್!

SSTV Profile Logo SStv July 31, 2025
ಪ್ರಕಾಶ್ ರಾಜ್ ಇಡಿ ವಿಚಾರಣೆಗೆ ಹಾಜರ್
ಪ್ರಕಾಶ್ ರಾಜ್ ಇಡಿ ವಿಚಾರಣೆಗೆ ಹಾಜರ್

ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ನಟ ಪ್ರಕಾಶ್ ರಾಜ್ ಬುಧವಾರ ಹೈದರಾಬಾದ್‌ನ ಬಶೀರ್‌ಬಾಗ್‌ನಲ್ಲಿರುವ ಜಾರಿ ನಿರ್ದೇಶನಾಲಯ (ED) ಕಚೇರಿಗೆ ಹಾಜರಾಗಿ ವಿಚಾರಣೆಗೆ ಭಾಗವಹಿಸಿದರು. ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರು ಪ್ರಚಾರ ಮಾಡಿದ ಆ್ಯಪ್‌ಗಳ ಬಗ್ಗೆ ಇಡಿ ಪೂರ್ಣ ವಿಚಾರಣೆ ನಡೆಸಿತು.

ಪ್ರಕಾಶ್ ರಾಜ್ ಜೊತೆ ನಟರಾದ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ ಮತ್ತು ಲಕ್ಷ್ಮಿ ಮಂಚು ಅವರಿಗೂ ಇಡಿ ಸಮನ್ಸ್ ನೀಡಿದ್ದು, ಆಗಸ್ಟ್ 6ರಂದು ವಿಜಯ್ ದೇವರಕೊಂಡ ಹಾಗೂ ಆಗಸ್ಟ್ 13ರಂದು ಲಕ್ಷ್ಮಿ ಮಂಚು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ಈ ಪ್ರಕರಣದಲ್ಲಿ ಒಟ್ಟು 29 ಸೆಲೆಬ್ರಿಟಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರಲ್ಲಿ ಕನ್ನಡ ನಟಿ ಪ್ರಣೀತಾ ಸುಭಾಷ್ ಕೂಡ ಒಬ್ಬರು. ಪ್ರಚಾರದ ಮುಖಾಂತರ ಜನರನ್ನು ಆನ್‌ಲೈನ್ ಬೆಟ್ಟಿಂಗ್‌ಗೆ ಆಕರ್ಷಿಸಿದ್ದಾಗಿ ಆರೋಪಿಸಲಾಗಿದೆ. ಈ ಪ್ರಕರಣದ ತನಿಖೆ ಮುಂದುವರೆದಿದ್ದು, ಇಡಿಯಿಂದ ಹೆಚ್ಚಿನ ವಿಚಾರಣೆ ನಡೆಯಲಿದೆ.