Back to Top

ಪವಿತ್ರಾ ಗೌಡಗೆ ಹೈಕೋರ್ಟ್ ಜಾಮೀನು ಕೊಲೆ ಪ್ರಕರಣದಲ್ಲಿ ತಾತ್ಕಾಲಿಕ ನಿರಾಳತೆ

SSTV Profile Logo SStv December 13, 2024
ಪವಿತ್ರಾ ಗೌಡಗೆ ಹೈಕೋರ್ಟ್ ಜಾಮೀನು
ಪವಿತ್ರಾ ಗೌಡಗೆ ಹೈಕೋರ್ಟ್ ಜಾಮೀನು
ಪವಿತ್ರಾ ಗೌಡಗೆ ಹೈಕೋರ್ಟ್ ಜಾಮೀನು ಕೊಲೆ ಪ್ರಕರಣದಲ್ಲಿ ತಾತ್ಕಾಲಿಕ ನಿರಾಳತೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಪವಿತ್ರಾ ಗೌಡ ಅವರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, 180 ದಿನಗಳ ಬಳಿಕ ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬರುವ ಅವಕಾಶ ದೊರಕಿದೆ. ಜೂನ್ ತಿಂಗಳಲ್ಲಿ ಅರೆಸ್ಟ್ ಆಗಿದ್ದ ಪವಿತ್ರಾ ಅವರಿಗೆ ಇದೀಗ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ. ಈ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಇತರ ಆರೋಪಿ ನಾಗರಾಜ್, ಲಕ್ಷ್ಮಣ್, ಜಗದೀಶ್, ಅನುಕುಮಾರ್, ಪ್ರದೋಷ್ ಅವರಿಗೆ ಇಂದು ಜಾಮೀನು ಸಿಕ್ಕಿದ್ದು, ಎಲ್ಲರೂ ಕಾನೂನು ಷರತ್ತುಗಳನ್ನು ಪಾಲಿಸಲು ಬದ್ದರಾಗಿದ್ದಾರೆ. ಕೇಸಿನ ಪ್ರಕಾರ, ರೇಣುಕಾಸ್ವಾಮಿ ಅವರ ಅಶ್ಲೀಲ ಸಂದೇಶಗಳಿಗೆ ಪ್ರತಿಯಾಗಿ ಅವರನ್ನು ಅಪಹರಿಸಿ, ಚಿತ್ರಹಿಂಸೆ ನೀಡಲಾಗಿದೆ. ನಂತರ ಅವರ ಶವವನ್ನು ರಾಜಕಾಲುವೆಗೆ ಎಸೆಯಲಾಗಿದೆ. ಈ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಹಾಗೂ ದರ್ಶನ್ ಎ2 ಆಗಿದ್ದಾರೆ. ಈ ತೀರ್ಪಿನಿಂದ ಪ್ರಕರಣದ ಆರೋಪಿಗಳಿಗೆ ತಾತ್ಕಾಲಿಕ ಶಾಂತಿ ಸಿಕ್ಕಿದ್ದು, ಮುಂದಿನ ಹಂತದ ವಿಚಾರಣೆಗಳಿಗೆ ಕೋರ್ಟ್ ಮುಂದಾಗಿದೆ.