Back to Top

ದರ್ಶನ್‌ಗೆ 50 ಬಾರಿ ಫೋನ್ ಏಕೆ ಮಾಡಿದ್ರು? ಪವಿತ್ರಾಗೌಡ ವಿರುದ್ಧ ಸುಪ್ರೀಂ ತೀವ್ರ ಪ್ರಶ್ನೆ

SSTV Profile Logo SStv July 24, 2025
ಪವಿತ್ರಾಗೌಡ ವಿರುದ್ಧ ಸುಪ್ರೀಂ ತೀವ್ರ ಪ್ರಶ್ನೆ
ಪವಿತ್ರಾಗೌಡ ವಿರುದ್ಧ ಸುಪ್ರೀಂ ತೀವ್ರ ಪ್ರಶ್ನೆ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮೊದಲ ಆರೋಪಿ ಪವಿತ್ರಾ ಗೌಡ ಮತ್ತೊಂದು ಕಠಿಣ ಹಂತವನ್ನು ಎದುರಿಸುತ್ತಿದ್ದಾರೆ. ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ರದ್ದುಪಡಿಸಲು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದು, ಇಂದಿನ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಪವಿತ್ರಾಗೌಡ ವಿರುದ್ಧ ಗಂಭೀರ ಪ್ರಶ್ನೆಗಳನ್ನು ಎಸೆದಿದೆ.

“ಎಲ್ಲಾ ಸಮಸ್ಯೆಗೆ ಪವಿತ್ರಾಗೌಡನೇ ಕಾರಣ, ಹೈಕೋರ್ಟ್ ಮಾಡಿದ ತಪ್ಪು ನಾವು ಮಾಡಲ್ಲ” ಎಂಬ Observations ನೀಡಿರುವ ಸುಪ್ರೀಂ ಕೋರ್ಟ್, ಪವಿತ್ರಾ ಗೌಡದ ವೈಯಕ್ತಿಕ ಜೀವನ, ತಲಾಕು, ಮತ್ತು ದರ್ಶನ್‌ಗೆ ಮಾಡಿದ 50 ಕರೆಗಳ ಬಗ್ಗೆ ಪ್ರಶ್ನಿಸಿದೆ.

ಪವಿತ್ರಾ ಪರ ವಕೀಲರು "ಅವರು ಕಲಾವಿದೆಯೆಂದು" ಮಾಹಿತಿ ನೀಡಿದ್ದು, ತೀರ್ಪು ಮುಂದಿನ ವಾರ ಪ್ರಕಟವಾಗಲಿದೆ. ಇದರಿಂದ ಪ್ರಕರಣದಲ್ಲಿ ದರ್ಶನ್‌ ಸೇರಿದಂತೆ 7 ಆರೋಪಿಗಳ ಜಾಮೀನು ಭವಿಷ್ಯ ತೀರಾ ನಿರ್ಧಾರಕ ಹಂತ ತಲುಪಿದೆ.