Back to Top

ಸಾಕಿದ ನಾಯಿಗಾಗಿ ಬ್ರೇಕಪ್ ಮಾಡಿಕೊಂಡ ಬಿಗ್ ಬಾಸ್ ಮಾಜಿ ಸ್ಪರ್ಧಿ ಪವಿ ಪೂವಪ್ಪ ಶ್ವಾನ ಪ್ರೇಮಕ್ಕೆ ಹ್ಯಾಟ್ಸ್​ಆಫ್

SSTV Profile Logo SStv December 17, 2024
ಪವಿ ಪೂವಪ್ಪ ಶ್ವಾನ ಪ್ರೇಮಕ್ಕೆ ಹ್ಯಾಟ್ಸ್​ಆಫ್
ಪವಿ ಪೂವಪ್ಪ ಶ್ವಾನ ಪ್ರೇಮಕ್ಕೆ ಹ್ಯಾಟ್ಸ್​ಆಫ್
ಸಾಕಿದ ನಾಯಿಗಾಗಿ ಬ್ರೇಕಪ್ ಮಾಡಿಕೊಂಡ ಬಿಗ್ ಬಾಸ್ ಮಾಜಿ ಸ್ಪರ್ಧಿ ಪವಿ ಪೂವಪ್ಪ ಶ್ವಾನ ಪ್ರೇಮಕ್ಕೆ ಹ್ಯಾಟ್ಸ್​ಆಫ್ ಬಿಗ್ ಬಾಸ್ ಕನ್ನಡ ಸೀಸನ್ 10ರ ಮೂಲಕ ಜನಪ್ರಿಯತೆ ಗಳಿಸಿದ ಫ್ಯಾಷನ್ ಡಿಸೈನರ್ ಪವಿ ಪೂವಪ್ಪ, ತಮ್ಮ ವೈಯಕ್ತಿಕ ಜೀವನದ ವಿಷಯದಲ್ಲಿ ಹೊಸ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಡಿಜೆ ಮ್ಯಾಡಿ ಜೊತೆ ಐದು ವರ್ಷಗಳ ರಿಲೇಶನ್‌ಶಿಪ್‌ನ ನಂತರ, ಮದುವೆ ನಡೆಸಲು ನಿರಾಕರಿಸಿ ಬ್ರೇಕಪ್ ಮಾಡಿದ್ದಾರೆ. "ನಾನು ಸಾಕಿದ ನಾಯಿಯಿಂದ ಅವರಿಗೆ ತೊಂದರೆ ಆಗಿದ್ದು, ಮದುವೆಯ ನಂತರ ನಾಯಿ ಸಾಕುವುದಕ್ಕೆ ಒಪ್ಪಿಗೆ ಇಲ್ಲ ಎಂದರು. ಈ ಕಾರಣಕ್ಕೆ ನಾವು ಸಂಬಂಧವನ್ನು ಮುಗಿಸಿದ್ದೇವೆ," ಎಂದು ಹೇಳಿದರು. ನಾಯಿ ಮೇಲಿನ ಪ್ರೀತಿಗಾಗಿ ತೆಗೆದುಕೊಂಡ ಈ ತೀರ್ಮಾನಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪವಿ ಪೂವಪ್ಪ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಇದ್ದು, ತಮ್ಮ ಅಭಿಮಾನಿಗಳ ಜೊತೆ ಈ ವಿಚಾರವನ್ನು ಓಪನ್ ಆಗಿ ಹಂಚಿಕೊಂಡಿದ್ದಾರೆ.