"ಆಷಾಢ ಶುಕ್ರವಾರ ಪತ್ನಿಯೊಂದಿಗೆ ಚಾಮುಂಡಿ ಬೆಟ್ಟದಲ್ಲಿ ದರ್ಶನ್ ದರ್ಶನ – ಭಕ್ತರಲ್ಲಿ ಸಂಭ್ರಮದ ಜ್ವಾಲೆ!"


ಆಷಾಢ ಮಾಸದ ಎರಡನೇ ಶುಕ್ರವಾರದಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಭಕ್ತರ ಸಾಗರವೇ ಹರಿದುಬಂದಿತ್ತು. ನಾಡಿನ ಅದಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನಕ್ಕಾಗಿ ಸಾವಿರಾರು ಮಂದಿ ಭಕ್ತರು ಮುಂಜಾನೆ ದೇಗುಲಕ್ಕೆ ಹರಿದುಬಂದಿದ್ದರು.
ಈ ಸಂದರ್ಭದಲ್ಲಿ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಅವರು ತಮ್ಮ ಪತ್ನಿಯೊಂದಿಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ, ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ಪ್ರತಿವರ್ಷವೂ ಆಷಾಢದಲ್ಲಿ ದೇವಿಯ ದರ್ಶನ ಪಡೆಯುವ ದರ್ಶನ್‌ರ ಸಂಪ್ರದಾಯ ಈ ಬಾರಿ ಮತ್ತೆ ಪುನರಾವೃತಿಯಾಯಿತು. ಭಕ್ತಿಯಲ್ಲಿ ಮಗ್ನರಾದ ದರ್ಶನ್ ದಂಪತಿ, ದೇವಿಯ ಅಲಂಕಾರ ದರ್ಶನ ಮಾಡಿಕೊಂಡು ಪೂಜೆಯಲ್ಲಿ ಪಾಲ್ಗೊಂಡರು.
ದರ್ಶನ್‌ರ ಆಗಮನದ ವೇಳೆ ಅವರ ಅಭಿಮಾನಿಗಳು ಕಾರಿನ ಸುತ್ತ ಜಮಾಯಿಸಿ “ಡಿಬಾಸ್, ಡಿಬಾಸ್” ಎಂದು ಕೂಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಅಭಿಮಾನಿಗಳು ಫೋಟೋ, ವಿಡಿಯೋ ತೆಗೆದು ಹರ್ಷ ವ್ಯಕ್ತಪಡಿಸಿದರು. ಚಾಮುಂಡೇಶ್ವರಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಮುಂಜಾನೆ 3:30ರಿಂದ ಅಭಿಷೇಕಗಳು ಹಾಗೂ ಬೆಳಿಗ್ಗೆ 6 ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಭಕ್ತರ ಅನುಕೂಲಕ್ಕಾಗಿ ಉಚಿತ ಬಸ್, ಕುಡಿಯುವ ನೀರು, ಶೌಚಾಲಯ ಹೀಗೆ ಮೂಲಭೂತ ಸೌಲಭ್ಯಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಹೆಚ್ಚಿನ ಭದ್ರತೆಗಾಗಿ ಪೊಲೀಸರು ನಿಯೋಜಿತರಾಗಿದ್ದರು.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
