Back to Top

ಪದವಿ ಓದುತ್ತಲೇ ಬಂಪರ್ ಆಫರ್ ಪಡೆದ ನಟಿ ತನಿಷ್ಕಾ ಶೆಟ್ಟಿ – ‘ಸು ಫ್ರಮ್ ಸೋ’ ಚಿತ್ರದ ಚೈತ್ರಾ ಪಾತ್ರದಿಂದ ಮೆಚ್ಚುಗೆ!

SSTV Profile Logo SStv July 29, 2025
ಪದವಿ ಓದುತ್ತಲೇ ಬಂಪರ್ ಆಫರ್ ಪಡೆದ ನಟಿ ತನಿಷ್ಕಾ ಶೆಟ್ಟಿ
ಪದವಿ ಓದುತ್ತಲೇ ಬಂಪರ್ ಆಫರ್ ಪಡೆದ ನಟಿ ತನಿಷ್ಕಾ ಶೆಟ್ಟಿ

ರಾಜ್ ಬಿ. ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಸಿನಿಮಾದಲ್ಲಿ ಚೈತ್ರಾ ಪಾತ್ರದಿಂದ ಗಮನ ಸೆಳೆದ ನಟಿ ತನಿಷ್ಕಾ ಶೆಟ್ಟಿ, ಈಗ ಸಿನಿ ಪ್ರೇಕ್ಷಕರ ಮನಸೂರೆಗೊಂಡಿದ್ದಾರೆ. ಮಂಗಳೂರಿನ ಮೂಲ ಹೊಂದಿದ ಈ ಪ್ರತಿಭಾವಂತಿ ನಟಿ, ಇದೀಗ ಮುಂಬೈನಲ್ಲಿ ನೆಲೆಸಿದ್ದು, ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ನಲ್ಲಿ ಪದವಿ ಅಧ್ಯಯನ ಮಾಡುತ್ತಿದ್ದಾರೆ.

ತನಿಷ್ಕಾಗೆ ‘ಸು ಫ್ರಮ್ ಸೋ’ ಆಫರ್ ಬಂದದ್ದು ಆಕಸ್ಮಿಕ. ಜೆಪಿ ತುಮಿನಾಡ್ ಟೀಂ ಒಂದು ನಾಟಕಕ್ಕಾಗಿ ಮುಂಬೈಗೆ ಭೇಟಿ ನೀಡಿದ್ದಾಗ, ನಾಟಕ ಆಯೋಜಿಸಿದ್ದ ಅವರ ತಂದೆ ಮೂಲಕತನಿಷ್ಕಾ ಗಮನಕ್ಕೆ ಬಂದರು. ಆಡಿಷನ್‌ನಲ್ಲಿ ತಮ್ಮ ಪ್ರತಿಭೆ ಮೆರೆದ ನಟಿಗೆ ಸಿನಿಮಾ ಅವಕಾಶ ದೊರೆಯಿತು.

ಶೂಟಿಂಗ್ ವೇಳೆ ಮಂಗಳೂರಿನಲ್ಲಿ ಬಹಳ ಸಮಯ ಕಳೆದ ಈ ಚೈತ್ರಾ ಪಾತ್ರದ ನಟಿ, ಈಗ ಕನ್ನಡ ಕಲಿಯುವ ಪ್ರಯತ್ನದಲ್ಲಿದ್ದಾರೆ. ತುಳುವನ್ನು ಸುಲಭವಾಗಿ ಮಾತನಾಡಬಲ್ಲ ಈ ನಟಿಗೆ, ಹಿಟ್ ಸಿನಿಮಾ ಬಳಿಕ ಹೊಸ ಅವಕಾಶಗಳು ಬರಲಿವೆ ಎಂದು ನಿರೀಕ್ಷೆಯಿದೆ. ತನಿಷ್ಕಾ ಕನ್ನಡ ಚಿತ್ರರಂಗದಲ್ಲಿ ಭವಿಷ್ಯ ಹೊಂದಿರುವ ಯುವ ಪ್ರತಿಭೆಯಾಗಿ ಹೊರಹೊಮ್ಮುತ್ತಿದ್ದಾರೆ.