Back to Top

ಒಟ್ಟಿಗೆ ಸ್ನಾನ ಮಾಡಿದ ಹನುಮಂತ ಧನರಾಜ್ ಬಿಗ್ ಬಾಸ್ ಮನೆಯಲ್ಲಿ ಶಾಕ್

SSTV Profile Logo SStv November 20, 2024
ಒಟ್ಟಿಗೆ ಸ್ನಾನ ಮಾಡಿದ ಹನುಮಂತ ಧನರಾಜ್
ಒಟ್ಟಿಗೆ ಸ್ನಾನ ಮಾಡಿದ ಹನುಮಂತ ಧನರಾಜ್
ಒಟ್ಟಿಗೆ ಸ್ನಾನ ಮಾಡಿದ ಹನುಮಂತ ಧನರಾಜ್ ಬಿಗ್ ಬಾಸ್ ಮನೆಯಲ್ಲಿ ಶಾಕ್ ‘ಬಿಗ್ ಬಾಸ್ ಕನ್ನಡ 11’ ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಬಳಿಕ ಮನೆಯಲ್ಲಿ ಗಲಾಟೆಗೂ, ತಮಾಷೆಗೂ ಕಮ್ಮಿ ಇಲ್ಲ. ಇತ್ತೀಚಿನ ಟಾಸ್ಕ್ ನಡುವೆಯೇ ಹನುಮಂತ ಮತ್ತು ಧನರಾಜ್ ಒಂದೇ ಬಾತ್‌ರೂಮ್‌ನಲ್ಲಿ ಸ್ನಾನ ಮಾಡಿದದ್ದು, ಮನೆ ಮಂದಿಗೆ ಶಾಕ್ ನೀಡಿದೆ. ಹನುಮಂತ ಈ ವಿಚಾರದಲ್ಲಿ, “ಇದು ನಿಯಮ ಉಲಂಗನ ಅಲ್ಲ. ಒಂದೇ ಬಾತ್‌ರೂಮ್‌ನಲ್ಲಿ ಸ್ನಾನ ಮಾಡುವುದು ತಪ್ಪಲ್ಲ,” ಎಂದು ಸ್ಪಷ್ಟನೆ ನೀಡಿದರು. ಇದರ ಬಗ್ಗೆ ಗೋಲ್ಡ್ ಸುರೇಶ್ ತಮಾಷೆ ಮಾಡಿ, ಶೋಭಾ ಶೆಟ್ಟಿ ಹಾಗೂ ಭವ್ಯಾ ಅವರನ್ನು ಅಚ್ಚರಿಗೊಳಿಸಿದರು. ಇದೀಗ, ಬಿಗ್ ಬಾಸ್‌ ಈ ವಿಷಯದಲ್ಲಿ ದಂಡ ವಿಧಿಸುತ್ತಾರಾ ಎಂಬ ಕುತೂಹಲ ಮನೆ ಮಾಡಿದೆ.ಐಶ್ವರ್ಯ ಸಿಂಧೋಗಿಯ ‘ಮುಜುಗರ’ ಪದ ಬಳಕೆಯಿಂದ ಉಗ್ರಂ ಮಂಜು ಹಾಗೂ ಗೌತಮಿ ಬೇಸರಗೊಂಡಿದ್ದಾರೆ. ಐಶ್ವರ್ಯ, “ಅವರ ಸ್ನೇಹದೊಳಗೆ ಹೋಗಲು ಮುಜುಗರ ಆಗುತ್ತದೆ,” ಎಂದಿದ್ದಾರೆ. ಮಂಜು ಇದಕ್ಕೆ ಕೋಪಗೊಂಡು, “ನನ್ನನ್ನು ಅಣ್ಣ ಅಂತ ಕರೆಯಬೇಡ,” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆಗಳಿಂದ ಬಿಗ್ ಬಾಸ್ ಮನೆಯಲ್ಲಿ ಪ್ರತಿ ಕ್ಷಣವೂ ಹೊಸ ತಿರುವುಗಳನ್ನು ತರುತ್ತಿದ್ದು, ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚುತ್ತಿದೆ.