"ನಮ್ಮವ್ರೇ ಕಾಲು ಎಳೀತಾರೆ" – ಒಗ್ಗಟ್ಟಿಲ್ಲದ ಕನ್ನಡ ಚಿತ್ರರಂಗದ ಬಗ್ಗೆ ಪ್ರೇಮ್ ಹಾಗೂ ರಮ್ಯಾ ಬೇಸರ


ಕನ್ನಡ ಚಿತ್ರರಂಗ ಹಲವು ಪ್ರತಿಭೆಗಳಿಂದ ಕೂಡಿರುವುದು ಸತ್ಯ. ಆದರೆ ಈ ರಂಗದೊಳಗಿನ ಒಗ್ಗಟ್ಟಿನ ಕೊರತೆ ಬಗ್ಗೆಯೂ ಇತ್ತೀಚೆಗೆ ಹಳೆಯರು ಹೊಸವರು ಎಲ್ಲರೂ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಗಮನಾರ್ಹ. ಇತ್ತೀಚೆಗೆ ನಟಿ ರಮ್ಯಾ ಅವರಿಂದ ಆರಂಭವಾದ ಈ ಚರ್ಚೆಗೆ ಈಗ ನಿರ್ದೇಶಕ ಜೋಗಿ ಪ್ರೇಮ್ ಸಹ ಧ್ವನಿ ನೀಡಿದ್ದು, ಈ ವಿಚಾರ ಮತ್ತಷ್ಟು ಗಂಭೀರತೆ ಪಡೆದುಕೊಂಡಿದೆ.
'ಕೆಡಿ' ಸಿನಿಮಾದ ವೇದಿಕೆಯಲ್ಲಿ ಪ್ರೇಮ್ ಆಕ್ರೋಶ, ಧ್ರುವ ಸರ್ಜಾ ಅಭಿನಯದ ‘ಕೆಡಿ: ದಿ ಡೆವಿಲ್’ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮದ ವೇಳೆ ಮಾತನಾಡಿದ ಪ್ರೇಮ್, "ಇಲ್ಲಿ ನಮ್ಮವ್ರೇ ನಮ್ಮ ಕಾಲು ಎಳೀತಾರೆ" ಎಂದು ನೇರವಾಗಿ ಕಿಡಿಕಾರಿದರು. ಅವರು ತಮಿಳು, ತೆಲುಗು ಚಿತ್ರರಂಗದ ಒಗ್ಗಟ್ಟನ್ನು ಉದಾಹರಿಸಿ, "ಅಲ್ಲಿ ಅಣ್ಣ ಇದ್ದರೆ ತಮ್ಮ ಕರೆದರೆ ಓಡಿಕೊಂಡು ಬರುತ್ತಾನೆ. ಆದರೆ ನಮ್ಮಲ್ಲಿ ಅಣ್ಣ ಇದ್ದರೆ ತಮ್ಮ ಕಲ್ಲು ಎತ್ತಿ ಹಾಕ್ತಾನೆ" ಎಂಬ ಶಬ್ದಗಳಲ್ಲಿ ಬೇಸರ ವ್ಯಕ್ತಪಡಿಸಿದರು. ಇತ್ತೀಚೆಗಷ್ಟೇ ರಮ್ಯಾ ಕೂಡ, “ಹೊಸಬರ ಚಿತ್ರಗಳಿಗೆ ಕನ್ನಡದ ಸ್ಟಾರ್‌ಗಳು ಬೆಂಬಲ ನೀಡುತ್ತಿಲ್ಲ. ಒಗ್ಗಟ್ಟು ಇಲ್ಲ” ಎಂದು ತೀವ್ರವಾಗಿ ಟೀಕಿಸಿದ್ದರು. ಅವರು ಹೇಳಿದ್ದು, "ಒಬ್ಬರ ಸಿನಿಮಾದ ಪ್ರಚಾರಕ್ಕೆ ಇನ್ನೊಬ್ಬರು ಹೋಗಲ್ಲ. ಹೆಣ್ಣು ನಟಿಯರಿಗೆ ಸಾಕಷ್ಟು ಮನ್ನಣೆ ಸಿಗುತ್ತಿಲ್ಲ" ಎಂಬ ಬೇಸರದ ಮಾತುಗಳು ಈಗ ಪ್ರೇಮ್ ಮಾತುಗಳ ಮೂಲಕ ಮತ್ತಷ್ಟು ದೃಢಪಡಿಸುತ್ತಿವೆ.
ಸಾಹಿತ್ಯ, ಅಭಿಮಾನ, ಬೆಂಬಲ ಎಲ್ಲವನ್ನೂ ತಾರತಮ್ಯವಿಲ್ಲದೇ ಹಂಚಿಕೊಳ್ಳೋದು ಬೇಕು, ಪ್ರೇಮ್ ಮಾತುಗಳಲ್ಲಿ ಒಂದು ತೀಕ್ಷ್ಣತೆ ಇದೆ – "ನಾವು ನಮ್ಮ ಮನೆಯಲ್ಲಿ ನಾವೇ ಹೊಡೆದಾಡಿಕೊಂಡು ಸಾಯೋದೆ? ಎಲ್ಲರೂ ಒಗ್ಗಟ್ಟಿನಿಂದ ಬಾಳೋಣ ಅನ್ನೋದು ಆಶೆ. ಇಲ್ಲಿ ಸಿನಿಮಾಗಿಂತ ಯಾರೂ ದೊಡ್ಡವರಿಲ್ಲ". ಅವರು ಸ್ಯಾಂಡಲ್‌ವುಡ್‌ನಲ್ಲಿ ಎಷ್ಟು ವ್ಯಥೆ ಇದೆ ಎಂಬುದನ್ನು ಈ ಪದಗಳಿಂದ ಬಹಿರಂಗಗೊಳಿಸಿದರು.
“ಡಾ. ರಾಜ್ ಕುಮಾರ್ ಸಮಯದಲ್ಲಿ ಅಂಬರೀಷ್ ಕರೆದರೆ ಎಲ್ಲರು ಬರುತ್ತಿದ್ದರು. ಈಗ ಅಂಥ ಸಹಕಾರ ಇಲ್ಲ. ಎಲ್ಲರೂ ತಮ್ಮದೇ ದಾರಿಗೆ ಹೋಗಿದ್ದಾರೆ” ಎಂಬ ಪ್ರೇಮ್ ಮಾತುಗಳು ಇಂದಿನ ಚಿತ್ರರಂಗದ ಸ್ಥಿತಿಗೆ ಪ್ರತಿಬಿಂಬ. ಒಗ್ಗಟ್ಟು ಇಲ್ಲದ ಚಿತ್ರರಂಗ ಎಂಬ ಕಾರಣದಿಂದ, ಹಲವು ಹೊಸ ಪ್ರತಿಭೆಗಳು ಮಿಂಚಲು ತಡವಾಗುತ್ತಿದೆ ಎನ್ನುವುದು ಸಹಜವಾಗಿ ಕೇಳಿಬರುತ್ತಿರುವ ಮಾತು. ಹಿರಿಯರ ಮಾರ್ಗದರ್ಶನ, ಸ್ಟಾರ್‌ಗಳ ಬೆಂಬಲ, ಹಾಗೂ ಸಹೋದರತ್ವದ ಮನೋಭಾವನೆ ಕನ್ನಡ ಚಲನಚಿತ್ರೋದ್ಯಮಗೆ ಬಹಳ ಅಗತ್ಯವಾಗಿದೆ ಎಂಬುದು ಈ ಚರ್ಚೆಯಿಂದ ಸ್ಪಷ್ಟವಾಗುತ್ತಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
