Back to Top

‘ಯಶ್ ಬರಲಿಲ್ಲ ಅಂದ್ರೂ ನಮ್ಮನೆ ಗೃಹಪ್ರವೇಶ ಮಾಡ್ತೀವಿ’ – ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ ತೀವ್ರ ಪ್ರತಿಕ್ರಿಯೆ!

SSTV Profile Logo SStv July 4, 2025
ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ ತೀವ್ರ ಪ್ರತಿಕ್ರಿಯೆ!
ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ ತೀವ್ರ ಪ್ರತಿಕ್ರಿಯೆ!

'ರಾಕಿಂಗ್ ಸ್ಟಾರ್' ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಈಗ ನಿರ್ಮಾಪಕಿಯಾಗಿ ಹೊಸ ಅಧ್ಯಾಯ ಶುರುಮಾಡಿದ್ದಾರೆ. ಅವರ ಮೊದಲ ಚಿತ್ರ ‘ಕೊತ್ತಲವಾಡಿ’ ಆಗಸ್ಟ್ 1ರಂದು ಬಿಡುಗಡೆಯಾಗಲಿದ್ದು, ಚಿತ್ರದ ಪ್ರಚಾರ ಕಾರ್ಯಕ್ಕೂ ಆರಂಭವಾಗಿದೆ. ಈ ಹಿನ್ನೆಲೆ ಡಾ. ರಾಜ್ ಪುಣ್ಯಭೂಮಿಯಲ್ಲಿ ಪೂಜೆ ಸಲ್ಲಿಸಿ ಮಾಧ್ಯಮಗಳೊಂದಿಗೆ ಪುಷ್ಪಾ ಮಾತುಕತೆ ನಡೆಸಿದರು.

ಯಶ್ ಪ್ರಚಾರಕ್ಕೆ ಬರ್ತಾರಾ? ಎಂಬ ಪ್ರಶ್ನೆಗೆ ಪುಷ್ಪಾ ನೇರ ಉತ್ತರ ಕೊಟ್ಟರು – “ಯಶ್ ಹತ್ತಿರ ಹೋಗಿ ಕೇಳಿ, ನಾನು ಏನು ಹೇಳಲ್ಲ. ನಮ್ಮ ಮನೆ ಕಟ್ಟಿ ಗೃಹಪ್ರವೇಶ ಮಾಡಿದರೂ, ಅವನು ಇಲ್ಲ ಅಂದ್ರೆ ನಾವು ಸುಮ್ಮನೆ ಮಾಡ್ತೀವಿ. ಸೆಂಟಿಮೆಂಟ್ ನಮ್ಮ ಮನೆಯಲ್ಲಿ ಕೆಲಸ ಮಾಡಲ್ಲ.”

ಮಗನ ಅಭಿಪ್ರಾಯ ಬೇಕಾ? ಎಂಬ ಪ್ರಶ್ನೆಗೆ, “ಯಶ್ ಒಬ್ಬನ ಅಭಿಪ್ರಾಯ ನನ್ನ ದುಡ್ಡು ವಾಪಸ್ ತರುತ್ತಾ? ನನಗೆ ಆಡಿಯನ್ಸ್ ಅಭಿಪ್ರಾಯವೇ ಮುಖ್ಯ!” ಎಂದು ಸ್ಪಷ್ಟವಾಗಿ ಉತ್ತರಿಸಿದರು. ಯಶ್‌ ಜೊತೆ ಮಾತಾಡಿದ್ದೀರಾ? ಎಂಬ ಪ್ರಶ್ನೆಗೆ, “ಇಲ್ಲ. ನಾನು ಮಾತಾಡಲ್ಲ. ಅವರ ಹೆಂಡತಿ ಮಾತಾಡ್ತಾರೆ. ಮದುವೆ ಮಾಡಿರೋದು ಅದಕ್ಕೆ ತಾನೇ!” ಎಂದು ನಕ್ಕು ಹೇಳಿದರು.

ಅಂಬರೀಶ್‌ ಶೈಲಿಯ ನೇರ ನುಡಿಗಳಿಂದ ಗಮನ ಸೆಳೆದ ಪುಷ್ಪಾ ಅರುಣ್ ಕುಮಾರ್, ಪ್ರಚಾರದಲ್ಲೂ ಹೊಸ ತಿರುವು ನೀಡಿದ್ದು, ‘ಕೊತ್ತಲವಾಡಿ’ ಮೇಲೆ ಹೆಚ್ಚು ಕುತೂಹಲ ಮೂಡಿಸಿದೆ.