Back to Top

ರಮ್ಮಿ, ಸಾಲ, ಖಿನ್ನತೆ, ಕಾಯಿಲೆ ಬಗ್ಗೆ ನಿರ್ದೇಶಕ ಗುರುಪ್ರಸಾದ್​ ಪತ್ನಿ ಸುಮಿತ್ರಾ ಸ್ಪಷ್ಟನೆ

SSTV Profile Logo SStv December 6, 2024
ನಿರ್ದೇಶಕ ಗುರುಪ್ರಸಾದ್​ ಪತ್ನಿ ಸುಮಿತ್ರಾ ಸ್ಪಷ್ಟನೆ
ನಿರ್ದೇಶಕ ಗುರುಪ್ರಸಾದ್​ ಪತ್ನಿ ಸುಮಿತ್ರಾ ಸ್ಪಷ್ಟನೆ
ರಮ್ಮಿ, ಸಾಲ, ಖಿನ್ನತೆ, ಕಾಯಿಲೆ ಬಗ್ಗೆ ನಿರ್ದೇಶಕ ಗುರುಪ್ರಸಾದ್​ ಪತ್ನಿ ಸುಮಿತ್ರಾ ಸ್ಪಷ್ಟನೆ ಪ್ರಸಿದ್ಧ ನಿರ್ದೇಶಕ ಗುರುಪ್ರಸಾದ್ ಅವರ ಆತ್ಮಹತ್ಯೆ ನಂತರ, ಅವರ ಮೇಲೆ ವಿವಿಧ ಆರೋಪಗಳು ಕೇಳಿಬಂದಿದ್ದವು. ಈ ಕುರಿತಂತೆ, ಪತ್ನಿ ಸುಮಿತ್ರಾ ಗುರುಪ್ರಸಾದ್ ಸ್ಪಷ್ಟನೆ ನೀಡಿ, ಅವರ ಕುಟುಂಬವನ್ನು ಕೇವಲ ವದಂತಿಗಳ ಆಧಾರದಲ್ಲಿ ನ್ಯಾಯವಿಲ್ಲದ ಮಾತುಗಳಿಂದ ದೂರಿಡಲು ಮನವಿ ಮಾಡಿದ್ದಾರೆ. ಸುಮಿತ್ರಾ ಅವರು ತಮ್ಮ ಸಂದೇಶದಲ್ಲಿ ಕೆಲ ಮಹತ್ವದ ಅಂಶಗಳನ್ನು ಹಂಚಿಕೊಂಡಿದ್ದಾರೆ ಗುರುಪ್ರಸಾದ್ ಅವರಿಗೆ ಕೋಟಿ ಕೋಟಿ ಸಾಲಗಳಿಲ್ಲ ಆನ್‌ಲೈನ್ ರಮ್ಮಿ ಕೇವಲ ಟೈಂಪಾಸ್​ಗಾಗಿ ಇದ್ದಿತ್ತು. ಅವರು ಖಿನ್ನತೆ (ಡಿಪ್ರೆಷನ್)ಗಾಗಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಇದು ಅತಿರೇಕದಲ್ಲಿರಲಿಲ್ಲ. ಅವರ ಬಗ್ಗೆ ಚರ್ಮರೋಗ ಅಥವಾ ವೈಯುಕ್ತಿಕ ಸಾಲಗಳ ಕುರಿತ ವದಂತಿಗಳು ಸಂಪೂರ್ಣ ಸುಳ್ಳು. ತನ್ನ ಗರ್ಭಧಾರಣೆಯ ಕುರಿತು ಹರಿದಾಡಿದ ಮಾತುಗಳು ಸಹ ತಪ್ಪು ಎಂದು ಸ್ಪಷ್ಟಪಡಿಸಿದ್ದಾರೆ. ಸುಮಿತ್ರಾ ಅವರು, "ಸತ್ತ ವ್ಯಕ್ತಿಯ ವ್ಯಕ್ತಿತ್ವವನ್ನು ಅವಮಾನಿಸುವುದು ಸರಿಯಲ್ಲ. ಇದು ನಮ್ಮ ಕುಟುಂಬದ ವೈಯುಕ್ತಿಕ ವಿಷಯ. ದಯವಿಟ್ಟು ಗುರುಪ್ರಸಾದ್ ಅವರ ಪ್ರತಿಭೆ, ಸಾಧನೆಗಳನ್ನು ಗೌರವಿಸಿ," ಎಂದು ಮನವಿ ಮಾಡಿದ್ದಾರೆ. ಇಂತಿ, ನಿಮ್ಮ ಮನೆ ಮಗಳು ಸುಮಿತ್ರಾ ಗುರುಪ್ರಸಾದ್.