Back to Top

ನೇತ್ರಾಣಿಯಲ್ಲಿ ಸ್ನೇಹಿತರ ಜೊತೆ ಸ್ಕೂಬಾ ಡೈವಿಂಗ್ ಮಾಡಿದ ಡಾಲಿ ಧನಂಜಯ

SSTV Profile Logo SStv November 25, 2024
ನೇತ್ರಾಣಿಯಲ್ಲಿ ಸ್ನೇಹಿತರ ಜೊತೆ ಡಾಲಿ ಧನಂಜಯ
ನೇತ್ರಾಣಿಯಲ್ಲಿ ಸ್ನೇಹಿತರ ಜೊತೆ ಡಾಲಿ ಧನಂಜಯ
ನೇತ್ರಾಣಿಯಲ್ಲಿ ಸ್ನೇಹಿತರ ಜೊತೆ ಸ್ಕೂಬಾ ಡೈವಿಂಗ್ ಮಾಡಿದ ಡಾಲಿ ಧನಂಜಯ ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ ಸಿನಿಮಾ ಕಾರ್ಯಗಳಿಂದ ಬ್ರೇಕ್ ಪಡೆದಿದ್ದು, ಸ್ನೇಹಿತರ ಜೊತೆ ನೇತ್ರಾಣಿ ದ್ವೀಪಕ್ಕೆ ಟ್ರಿಪ್ ಹೋಗಿದ್ದಾರೆ. ಆಗ ಅವರು ಸ್ಕೂಬಾ ಡೈವಿಂಗ್ ಮಾಡಿ ಸ್ವಲ್ಪ ಸಮಯವನ್ನು ಆನಂದಿಸಿದ್ದಾರೆ. ಈ ಕುರಿತ ಫೋಟೋ ಮತ್ತು ವಿಡಿಯೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಮುರುಡೇಶ್ವರದಿಂದ 10 ಕಿಮೀ ದೂರದಲ್ಲಿರುವ ನೇತ್ರಾಣಿ ದ್ವೀಪದಲ್ಲಿ, ಡಾಲಿ ಸುಮಾರು 45 ನಿಮಿಷಗಳ ಕಾಲ ಸ್ಕೂಬಾ ಡೈವಿಂಗ್ ಮಾಡಿದರು. ಈ ರೋಮಾಂಚಕ ಅನುಭವದಲ್ಲಿ ಮೈಸೂರಿನ ಸ್ನೇಹಿತರು ಡಾಲಿಗೆ ಸಾಥ್ ನೀಡಿದರು. ಇನ್ನೊಂದು ವಿಷಯವೆಂದರೆ, ಡಾಲಿ ಧನಂಜಯ ಫೆ.16ರಂದು ಮೈಸೂರಿನಲ್ಲಿ ತನ್ನ ಪ್ರಿಯತಮೆ ಡಾಕ್ಟರ್ ಧನ್ಯತಾ ಜೊತೆ ಹಸೆಮಣೆ ಏರಲಿದ್ದಾರೆ. ಪ್ರೀತಿಗೆ ಮದುವೆಯ ಮುದ್ರೆ ಒತ್ತಲು ಈ ಜೋಡಿ ಸಜ್ಜಾಗಿದೆ.