ಶಾಲಾ ಮಕ್ಕಳಿಗೆ 10 ನಿಮಿಷದ ಡ್ಯಾನ್ಸ್ ಕಲಿಸಲು 5 ಲಕ್ಷ ಬೇಡಿಕೆ ನವ್ಯಾ ನಾಯರ್ ಮೇಲೆ ಆರೋಪ


ಶಾಲಾ ಮಕ್ಕಳಿಗೆ 10 ನಿಮಿಷದ ಡ್ಯಾನ್ಸ್ ಕಲಿಸಲು 5 ಲಕ್ಷ ಬೇಡಿಕೆ ನವ್ಯಾ ನಾಯರ್ ಮೇಲೆ ಆರೋಪ ಕೇರಳದ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಅವರು, ಸರ್ಕಾರಿ ಶಾಲಾ ಮಕ್ಕಳಿಗೆ ಡ್ಯಾನ್ಸ್ ಕಲಿಸಲು ನಟಿಯೊಬ್ಬರು 5 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಘಟನೆಯಾದ ಮೇಲೆ, ಸಾಮಾಜಿಕ ಮಾಧ್ಯಮಗಳಲ್ಲಿ ಇದು ನವ್ಯಾ ನಾಯರ್ ಎನ್ನುವ ಚರ್ಚೆ ಹೆಚ್ಚುತ್ತಿದೆ.
ಮುಂಬರುವ ರಾಜ್ಯ ಶಾಲಾ ಉತ್ಸವಕ್ಕಾಗಿ 10 ನಿಮಿಷದ ಸ್ವಾಗತ ನೃತ್ಯ ಕಲಿಸಲು ಈ ಮೊತ್ತ ಕೇಳಲಾಗಿದೆ. "ಹಣದ ದುರಾಸೆ ದುರಂತವಾಗಿದೆ. ಅನೇಕ ನೃತ್ಯ ಶಿಕ್ಷಕರು ಈ ಕೆಲಸವನ್ನು ಪುಣ್ಯಕರ್ಮವೆಂದು ನೋಡುತ್ತಾರೆ" ಎಂದು ಸಚಿವರು ಹೇಳಿದ್ದಾರೆ.
ನವ್ಯಾ ನಾಯರ್, ಕನ್ನಡದ ‘ಗಜ’, ‘ದೃಶ್ಯ’ ಸಿನಿಮಾಗಳಲ್ಲಿ ನಟಿಸಿ ಪ್ರಸಿದ್ಧರಾಗಿದ್ದರು. ಇತ್ತೀಚೆಗೆ ಅವರು ಮಲಯಾಳಂ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಈ ಆರೋಪಗಳು ನವ್ಯಾ ನಾಯರ್ ಅವರಿಂದ ಪ್ರತಿಕ್ರಿಯೆ ನಿರೀಕ್ಷಿಸುತ್ತಿರುವಂತೆಯೇ, ಘಟನೆಯ ಬಗ್ಗೆ ಚರ್ಚೆಗಳು ಮುಂದುವರಿಯುತ್ತಿವೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
