Back to Top

ಚಿನ್ನ ಕಳ್ಳಸಾಗಣೆ ಪ್ರಕರಣ: ನಟಿ ರನ್ಯಾ ರಾವ್‌ಗೆ ಸೇರಿದ ₹34 ಕೋಟಿ ಆಸ್ತಿ ಜಪ್ತಿ

SSTV Profile Logo SStv July 5, 2025
ನಟಿ ರನ್ಯಾ ರಾವ್‌ಗೆ ಸೇರಿದ ₹34 ಕೋಟಿ ಆಸ್ತಿ ಜಪ್ತಿ
ನಟಿ ರನ್ಯಾ ರಾವ್‌ಗೆ ಸೇರಿದ ₹34 ಕೋಟಿ ಆಸ್ತಿ ಜಪ್ತಿ

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿ ರನ್ಯಾ ರಾವ್‌ಗೆ ಸೇರಿದ ₹34.12 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಜಪ್ತಿ ಮಾಡಿದೆ. ಈ ಆಸ್ತಿಗಳಲ್ಲಿ ಬೆಂಗಳೂರಿನ ವಿಕ್ಟೋರಿಯಾ ಲೇಔಟ್‌ನ ಐಷಾರಾಮಿ ಮನೆ, ಅರ್ಕಾವತಿ ಬಡಾವಣೆಯ ನಿವೇಶನ, ತುಮಕೂರಿನ ಕೈಗಾರಿಕಾ ಜಮೀನು ಮತ್ತು ಆನೇಕಲ್‌ ತಾಲ್ಲೂಕಿನ ಕೃಷಿ ಭೂಮಿಗಳು ಸೇರಿವೆ.

ಮಾರ್ಚ್ 3 ರಂದು ದುಬೈನಿಂದ ಹಿಂದಿರುಗುತ್ತಿದ್ದ ವೇಳೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ರನ್ಯಾ ಬಂಧನಕ್ಕೊಳಗಾಗಿದ್ದರು. ಅವರಿಂದ ₹12.56 ಕೋಟಿ ಮೌಲ್ಯದ 14.2 ಕೆ.ಜಿ. ಚಿನ್ನ ವಶಕ್ಕೆ ಪಡೆಯಲಾಗಿತ್ತು. ಈ ಪ್ರಕರಣದಲ್ಲಿ ರಾಜು ಮತ್ತು ಸಾಹಿಲ್ ಜೈನ್ ಎಂಬವರು ಸಹ ಆರೋಪಿಗಳಾಗಿದ್ದಾರೆ.

ಇ.ಡಿ. ತನಿಖೆಯ ಪ್ರಕಾರ, ರನ್ಯಾ ಕಳ್ಳಸಾಗಣೆ ಜಾಲದ ಪ್ರಮುಖ ಭಾಗವಾಗಿದ್ದು, ಕಳ್ಳಸಾಗಣೆಯಿಂದ ಗಳಿಸಿದ ಹಣವನ್ನು ಆಸ್ತಿಗಳ ರೂಪದಲ್ಲಿ ಹೂಡಿಕೆ ಮಾಡಲಾಗಿದೆ. ಬ್ಯಾಂಕ್ ಖಾತೆ ಮತ್ತು ಹೂಡಿಕೆಗಳ ತಪಾಸಣೆಯ ಬಳಿಕ ಆಸ್ತಿ ಜಪ್ತಿ ನಡೆದಿದೆ. CBI ಮತ್ತು DRI ಸಹ ಈ ತನಿಖೆಗೆ ಸಹಕಾರ ನೀಡಿದ್ದಾರೆ.