Back to Top

ಚಿನ್ನ ಕಳ್ಳಸಾಗಣೆ ಪ್ರಕರಣ: ನಟಿ ರನ್ಯಾ ರಾವ್‌ಗೆ ಒಂದು ವರ್ಷ ಜೈಲು ಶಾಶ್ವತ!

SSTV Profile Logo SStv July 17, 2025
ನಟಿ ರನ್ಯಾ ರಾವ್‌ಗೆ ಒಂದು ವರ್ಷ ಜೈಲು ಶಾಶ್ವತ!
ನಟಿ ರನ್ಯಾ ರಾವ್‌ಗೆ ಒಂದು ವರ್ಷ ಜೈಲು ಶಾಶ್ವತ!

ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, COFEPOSA (ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ನಿಯಂತ್ರಣ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಾಗಿರುವುದರಿಂದ ಒಂದು ವರ್ಷ ಜಾಮೀನು ಸಾಧ್ಯವಿಲ್ಲ ಎಂಬುದಾಗಿ ತಿಳಿದುಬಂದಿದೆ.

ಮಾರ್ಚ್ 3ರಂದು ಡಿಆರ್‌ಐ ಅಧಿಕಾರಿಗಳು ರನ್ಯಾ ಅವರನ್ನು ಬಂಧಿಸಿದ್ದಾಗಿನಿಂದಲೇ ಅವರು ಜೈಲಿನಲ್ಲಿದ್ದಾರೆ. ವಿದೇಶದಿಂದ ಚಿನ್ನ ಸಾಗಾಟ ಮಾಡಿ, ಪೊಲೀಸ್ ವ್ಯವಸ್ಥೆಯ ದುರ್ಬಳಕೆ ಮಾಡಿದ್ದಾರೆ ಎಂಬ ಗಂಭೀರ ಆರೋಪಗಳಿದ್ದಾರೆ.

ಈ ಕಾಯ್ದೆಯ ಪ್ರಕಾರ, ಆರೋಪಿಗೆ ಬೇರೆ ಯಾವುದೇ ನ್ಯಾಯಾಲಯದಿಂದ ಜಾಮೀನು ಸಿಕ್ಕರೂ, ಬಿಡುಗಡೆ ಸಾಧ್ಯವಿಲ್ಲ. ಈಗ COFEPOSA ಅಡ್ವೈಸರಿ ಬೋರ್ಡ್ ಸೂಚನೆಯಂತೆ, ಡಿಆರ್‌ಐ ಅಧಿಕಾರಿಗಳು ಜೈಲು ಅಧಿಕಾರಿಗಳಿಗೆ ರನ್ಯಾಗೆ ಜಾಮೀನು ಮಂಜೂರಾಗದಂತೆ ಮಾಹಿತಿ ನೀಡಿದ್ದಾರೆ.

ಈಗ ರನ್ಯಾ ರಾವ್‌ಗೆ ಒಟ್ಟು ಒಂದು ವರ್ಷ ಜೈಲಿನಲ್ಲಿಯೇ ಇರಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ. ಇದರಿಂದ ಅವರು ಹಾಗೂ ಅವರ ಅಭಿಮಾನಿಗಳಲ್ಲಿ ನಿರಾಶೆ ಮೂಡಿದೆ.