Back to Top

ದರ್ಶನ್ ಫ್ಯಾನ್ಸ್ ಕಮೆಂಟ್‌ಗೆ ಕಾನೂನು ಬಿಸಿ – ನಟಿ ರಮ್ಯಾ ದೂರು ಬಳಿಕ ಸಿಸಿಬಿ ಸಖತ್ ಆಕ್ಷನ್!

SSTV Profile Logo SStv August 5, 2025
ನಟಿ ರಮ್ಯಾ ದೂರು ಬಳಿಕ ಸಿಸಿಬಿ ಸಖತ್ ಆಕ್ಷನ್!
ನಟಿ ರಮ್ಯಾ ದೂರು ಬಳಿಕ ಸಿಸಿಬಿ ಸಖತ್ ಆಕ್ಷನ್!

ನಟಿ ಹಾಗೂ ಮಾಜಿ ಸಂಸದೆ ರಮ್ಯಾಗೆ ಅಶ್ಲೀಲ ಮೆಸೇಜ್ ಕಳುಹಿಸಿ ನಿಂದನೆ ಮಾಡಿದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ತನಿಖೆಗೆ ವೇಗ ನೀಡಿದ್ದು, ಈಗಾಗಲೇ 48 ಐಪಿ ಅಡ್ರೆಸ್ ಪತ್ತೆ ಹಚ್ಚಿದ್ದಾರೆ. ಇವರಲ್ಲಿ 15 ಜನರನ್ನು ಗುರುತಿಸಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ.

ಈ ಆರೋಪಿಗಳು ನಟ ದರ್ಶನ್ ಅಭಿಮಾನಿಗಳೆಂದು ಗುರುತಿಸಿಕೊಂಡವರು. ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಕೋಪಗೊಂಡು ಅಶ್ಲೀಲ ಮೆಸೇಜ್ ಕಳುಹಿಸಿದ್ದರು. ಇದನ್ನು ಗಂಭೀರವಾಗಿ ಪಡೆದ ರಮ್ಯಾ ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ದೂರು ನೀಡಿದರ ನಂತರ ಎಫ್‌ಐಆರ್ ದಾಖಲಾಗಿದೆ.

ಅನೇಕರು ಈಗಾಗಲೇ ಕ್ಷಮೆ ಕೇಳಿದರೆ, ಕೆಲವರು ಐಪಿ ಬ್ಲಾಕ್ ಮಾಡಿಕೊಂಡು ಪರಾರಿಯಾಗಿದ್ದಾರೆ. ಚಿಕ್ಕಮಗಳುರು, ಚಿತ್ರದುರ್ಗ ಮತ್ತು ಕೋಲಾರ ಭಾಗದವರು ಹೆಚ್ಚಿನ ಅಶ್ಲೀಲ ಸಂದೇಶ ಕಳಿಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಸಿಸಿಬಿ ಪೊಲೀಸರು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಪ್ರಕರಣ ಇನ್ನೂ ಚುರುಕಾಗುತ್ತಿದೆ.