Back to Top

ಅಶ್ಲೀಲ ಮೆಸೇಜ್ ಕೇಸ್: ರಮ್ಯಾ ದೂರು ಫಲಿತಾಂಶ, ಇಬ್ಬರು ಬಂಧನ!

SSTV Profile Logo SStv August 2, 2025
ನಟಿ ರಮ್ಯಾ ದೂರು ಬಳಿಕ ಸಿಸಿಬಿ ಝಲಕ್!
ನಟಿ ರಮ್ಯಾ ದೂರು ಬಳಿಕ ಸಿಸಿಬಿ ಝಲಕ್!

ನಟಿ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ ಪ್ರಕರಣದಲ್ಲಿ ಸಿಸಿಬಿ ಸೈಬರ್ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಳ್ಳಾರಿ ಮತ್ತು ಚಿತ್ರದುರ್ಗ ಮೂಲದ ಇಬ್ಬರನ್ನು ಬಂಧಿಸಲಾಗಿದ್ದು, ಇನ್ನೊಬ್ಬನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ದರ್ಶನ್ ಅಭಿಮಾನಿಗಳೆಂದು ಹೇಳಿಕೊಳ್ಳುವವರು ಈ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದರೆಂಬ ಆರೋಪವಿದೆ. ನಟಿ ರಮ್ಯಾ ಅವರು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ವಿರುದ್ಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ, ಕೆಲ ಅಭಿಮಾನಿಗಳು ಆಕ್ರೋಶ ತೋರಿಸಿದ್ದರು.

ಇದರಿಂದ ಉದ್ವಿಗ್ನಗೊಂಡ ರಮ್ಯಾ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದು, ಪ್ರಕರಣದಲ್ಲಿ ಇನ್ನೂ ಕೆಲವು ಹೆಸರುಗಳು ಉಳಿದಿರುವುದರಿಂದ ಸಂಬಂಧಿಸಿದವರು ಆತಂಕದಲ್ಲಿದ್ದಾರೆ.