Back to Top

ದರ್ಶನ್ ಫ್ಯಾನ್ಸ್ ವಿವಾದ: ನಟ ಪ್ರಥಮ್‌, ರಕ್ಷಕ್‌ಗೂ ಪೊಲೀಸ್ ನೋಟಿಸ್!

SSTV Profile Logo SStv July 31, 2025
ನಟ ಪ್ರಥಮ್‌, ರಕ್ಷಕ್‌ಗೂ ಪೊಲೀಸ್ ನೋಟಿಸ್!
ನಟ ಪ್ರಥಮ್‌, ರಕ್ಷಕ್‌ಗೂ ಪೊಲೀಸ್ ನೋಟಿಸ್!

ನಟ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಅವರಿಗೆ ಜೀವ ಬೆದರಿಕೆ ಪ್ರಕರಣ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಿಂದ ಸ್ಥಳ ಮಹಜರಿಗಾಗಿ ನೋಟಿಸ್ ಕಳುಹಿಸಲಾಗಿದೆ. ಈ ನೋಟಿಸ್‌ನ್ನು ಪ್ರಥಮ್, ರಕ್ಷಕ್ ಹಾಗೂ ಜಮೀನುದಾರ ಮಹೇಶ್ಗೆ ನೀಡಲಾಗಿದೆ. ಪೊಲೀಸರು ನೋಟಿಸ್‌ ಮೂಲಕ ಘಟನೆ ನಡೆದ ಸ್ಥಳವನ್ನು ತೋರಿಸಬೇಕೆಂದು ತಿಳಿಸಿದ್ದು, ಇಂದು ಬೆಳಿಗ್ಗೆ 11 ಗಂಟೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ಪ್ರಥಮ್ ಈ ಹಿಂದೆ, ಡ್ಯಾಗರ್ ತೋರಿಸಿ ಬೆದರಿಕೆ ಹಾಕಲಾಗಿದೆ ಎಂಬ ಗಂಭೀರ ಆರೋಪವನ್ನು ಮಾಡಿದ್ದರು. ಘಟನೆ ಸಂಬಂಧ ರೌಡಿ ಶೀಟರ್‌ಗಳು ಬೇಕರಿ ರಘು ಮತ್ತು ಯಶಸ್ವಿನಿಗೆ ಸಹ ನೋಟಿಸ್ ಜಾರಿ ಆಗಿದೆ. ಪ್ರಥಮ್ ಪೊಲೀಸರಿಗೆ ನೀಡಿದ ದೂರು ಪ್ರಕಾರ, 22 ಜುಲೈ ರಂದು ದೇವಾಲಯ ಕಾರ್ಯಕ್ರಮದಿಂದ ವಾಪಸ್ ಬರುತ್ತಿದ್ದಾಗ ಈ ಬೆದರಿಕೆ ನಡೆಯಿತು.

ಪ್ರಥಮ್ ತಮ್ಮ ಲಿಖಿತ ದೂರಿನಲ್ಲಿ – “ನನಗೆ ತೇಜೋವಧೆ ಮಾಡಲಾಗುತ್ತಿದೆ, ನಾನು ಟ್ರೋಲ್ ಆಗುತ್ತಿದ್ದೇನೆ. ಈ ಟ್ರೋಲ್‌ಗಳಿಗೆ ನೀವು ಕಾರಣವಾಗಬಾರದು” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಸದ್ಯ ಪೊಲೀಸರು ಸ್ಥಳ ಪರಿಶೀಲನೆ ಹಾಗೂ ವಿಚಾರಣೆ ಆರಂಭಿಸಿದ್ದಾರೆ.