Back to Top

ಮೈಸೂರಿಗೆ ಹೋಗಲು ದರ್ಶನ್ ಮನವಿ ಕಾರಣವೇನು

SSTV Profile Logo SStv December 19, 2024
ಮೈಸೂರಿಗೆ ಹೋಗಲು ದರ್ಶನ್ ಮನವಿ
ಮೈಸೂರಿಗೆ ಹೋಗಲು ದರ್ಶನ್ ಮನವಿ
ಮೈಸೂರಿಗೆ ಹೋಗಲು ದರ್ಶನ್ ಮನವಿ ಕಾರಣವೇನು ನಟ ದರ್ಶನ್, ಮೆಡಿಕಲ್ ಗ್ರೌಂಡ್ಸ್‌ನಲ್ಲಿ ಮಧ್ಯಂತರ ಜಾಮೀನು ಪಡೆದ ನಂತರ, ಮೈಸೂರಿಗೆ ಹೋಗಲು ನಾಲ್ಕು ವಾರಗಳ ಅನುಮತಿ ಕೇಳಿದ್ದಾರೆ. ಈ ಕುರಿತಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ದರ್ಶನ್‌ ಅವರ ವಕೀಲರು, ಅನಾರೋಗ್ಯದಲ್ಲಿರುವ ತಾಯಿಯನ್ನು ಭೇಟಿ ಮಾಡುವುದು, ಮೈಸೂರಿನ ಫಾರ್ಮ್ ಹೌಸ್‌ನ ಸಾಕು ಪ್ರಾಣಿಗಳನ್ನ ನೋಡುವುದು, ಮತ್ತು ಆಸ್ಪತ್ರೆಗೆ ತೆರಳಿ ಎರಡನೇ ಅಭಿಪ್ರಾಯ ಪಡೆಯುವುದು ಮುಖ್ಯ ಕಾರಣಗಳೆಂದು ಉಲ್ಲೇಖಿಸಿದ್ದಾರೆ. ಎಸ್ಪಿಪಿ ಸಚಿನ್ ಚಂದ್ರಹಾಸ ಅವರು ದರ್ಶನ್ ಮನವಿಗೆ ತೀವ್ರ ಅಕ್ಷೇಪ ವ್ಯಕ್ತಪಡಿಸಿದ್ದು, ಮೈಸೂರಿಗೆ ಹೋಗಲು ಅನುಮತಿ ನೀಡದಂತೆ ವಾದ ಮಂಡಿಸಿದ್ದಾರೆ. ಕೋರ್ಟ್ ಆದೇಶವನ್ನು ಸೋಮವಾರ ಪ್ರಕಟಿಸಲಿದ್ದು, ಈ ವಿವಾದಕ್ಕೆ ಉತ್ತರ ಸಿಗಲಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದರ್ಶನ್, ಡಿಸ್ಚಾರ್ಜ್ ಆದ ನಂತರ ತನ್ನ ಪುತ್ರ ವಿನೀಶ್ ಜೊತೆಯಾಗಿ ಮನೆಗೆ ಮರಳಿದರು. ವಿನೀಶ್ ತಮ್ಮ ತಂದೆಯೊಂದಿಗೆ ನಿಂತು ಬಲವಾದ ಬೆಂಬಲ ನೀಡಿದ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ದರ್ಶನ್‌ ಅವರ ಮೈಸೂರಿಗೆ ತೆರಳುವ ಮನವಿ ಸೃಷ್ಟಿಸಿರುವ ಕುತೂಹಲ, ಮುಂದಿನ ದಿನಗಳಲ್ಲಿ ಹೆಚ್ಚಿನ ಚರ್ಚೆಗೆ ಗ್ರಾಸವಾಗುವ ನಿರೀಕ್ಷೆಯಿದೆ.