Back to Top

'ಬಲರಾಮನ ದಿನಗಳು' ಚಿತ್ರದಲ್ಲಿ ಬಿಗ್ ಬಾಸ್ ಬುಜ್ಜಿ ರಜತ್ ಕಿಶನ್ – ಫಸ್ಟ್ ಲುಕ್ ರಿಲೀಸ್!

SSTV Profile Logo SStv July 21, 2025
ಮುಸ್ಲಿಂ ಪಾತ್ರದಲ್ಲಿ ರಜತ್ ಕಿಶನ್
ಮುಸ್ಲಿಂ ಪಾತ್ರದಲ್ಲಿ ರಜತ್ ಕಿಶನ್

ಬಿಗ್ ಬಾಸ್ ಸೀಸನ್ 11ರಲ್ಲಿ ಜನಮನ ಸೆಳೆದಿದ್ದ ರಜತ್ ಕಿಶನ್ ಈಗ 'ಬಲರಾಮನ ದಿನಗಳು' ಚಿತ್ರದಲ್ಲಿ ಹೊಸ ಶೈಲಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ನಿರ್ಮಾಪಕ ಶ್ರೇಯಸ್ ಸಾಮಾಜಿಕ ಜಾಲತಾಣದಲ್ಲಿ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ರಜತ್, ಚಿತ್ರದಲ್ಲಿ ಮುಸ್ಲಿಂ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಅಂಧಾಜು ಫೋಟೋ ನೋಡಿದ ತಕ್ಷಣವೇ ಮೂಡುತ್ತಿದೆ. ಪಠಾಣ್ ಲುಕ್‌ನಲ್ಲಿ ಲಾಂಗ್ ಮತ್ತು ಹುಂಜ ಹಿಡಿದಿರುವ ರಜತ್, ವಿಭಿನ್ನ ಛಾಯೆಯಲ್ಲಿ ಕಾಣಿಸುತ್ತಿದ್ದಾರೆ.

ಈ ಚಿತ್ರದ ಹೀರೋ ವಿನೋದ್ ಪ್ರಭಾಕರ್, ಅವರು ಬಲರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದು, ನಿರ್ದೇಶನವನ್ನೂ ಕೆ.ಎಂ. ಚೈತನ್ಯ ವಹಿಸಿದ್ದಾರೆ. ಚಿತ್ರದಲ್ಲಿ ಆಶಿಷ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ, ವಿನಯ್ ಗೌಡ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

'ಬಲರಾಮನ ದಿನಗಳು' ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಪೋಸ್ಟ್‌ಪ್ರೊಡಕ್ಷನ್ ಕಾರ್ಯಗಳು ಆರಂಭವಾಗಲಿವೆ. ಸಿನಿಮಾ ಬೆಂಗಳೂರಿನ ಕಥಾ ಹಿನ್ನೆಲೆ ಹೊಂದಿದ್ದು, ರಜತ್ ಕಿಶನ್ ಪಾತ್ರದ ಮೂಲಕ ಚಿತ್ರಕ್ಕೆ ವಿಭಿನ್ನತೆ ಸೇರಲಿದೆ ಎಂಬ ನಿರೀಕ್ಷೆಯಿದೆ.