Back to Top

ಯಶ್ – ರಾಧಿಕಾ ಪಂಡಿತ್ ಜೋಡಿಗೆ ‘ಮೊಗ್ಗಿನ ಮನಸು’ 17 ವರ್ಷ: ರೀಲ್ನಿಂದ ರಿಯಲ್ ಲೈಫ್ ವರೆಗೆ ಜಯಯಾತ್ರೆ

SSTV Profile Logo SStv July 19, 2025
ಮೊಗ್ಗಿನ ಮನಸು ಅರಳಿ 17 ವರ್ಷ!
ಮೊಗ್ಗಿನ ಮನಸು ಅರಳಿ 17 ವರ್ಷ!

ಜುಲೈ 18, 2008ರಂದು ಬಿಡುಗಡೆಯಾದ 'ಮೊಗ್ಗಿನ ಮನಸು' ಚಿತ್ರಕ್ಕೆ ಇಂದಿಗೆ 17 ವರ್ಷ ಪೂರೈಸಿದ್ದು, ಈ ಚಿತ್ರವು ಯಶ್ ಮತ್ತು ರಾಧಿಕಾ ಪಂಡಿತ್ ಅವರ ಬದುಕಿನಲ್ಲಿ ಮಹತ್ವದ ಮಾದರಿಯಾಗಿದೆ. ಈ ಚಿತ್ರದ ಮೂಲಕ ತೆರೆಗೆ ಕಾಲಿಟ್ಟ ಈ ಜೋಡಿ, ಇಂದಿಗೆ ನಿಜ ಜೀವನದಲ್ಲೂ ದಾಂಪತ್ಯ ಜೀವನ ನಡೆಸುತ್ತಾ, ಕನ್ನಡಿಗರ ಪ್ರೀತಿಯಲ್ಲೇ ನಿಂತಿದ್ದಾರೆ.

‘ನಂದಗೋಕುಲ’ ಧಾರಾವಾಹಿಯಿಂದ ಜರ್ನಿ ಆರಂಭಿಸಿದ ಈ ಇಬ್ಬರು, ಮೊದಲ ಬಾರಿಗೆ ‘ಮೊಗ್ಗಿನ ಮನಸು’ ಮೂಲಕ ಬೆಳ್ಳಿತೆರೆಯ ಮೇಲೆ ಒಂದಾಗಿದ್ದು, ನಂತರ ‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಸೇರಿದಂತೆ ನಾಲ್ಕು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಅವರ ತೆರೆ ಮೇಲಿನ ಜೋಡಿ, ಬಳಿಕ ರೀಲ್‌ನಿಂದ ರಿಯಲ್ ಜೋಡಿಯಾಗಿ ಮಾರ್ಪಟ್ಟಿದ್ದು, ಸಾವಿರಾರು ಅಭಿಮಾನಿಗಳಿಗೆ ಸ್ಪೂರ್ತಿಯಾಗಿದೆ.

ಯಶ್ ಇಂದಿಗೆ ಕೆಜಿಎಫ್ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್, 'ಟಾಕ್ಸಿಕ್' ಹಾಗೂ ‘ರಾಮಾಯಣ’ ಚಿತ್ರಗಳೊಂದಿಗೆ ಬಾಲಿವುಡ್‌ನಲ್ಲಿ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಈ ಹಂತದ ಯಶಸ್ಸು ಅವರಿಗೆ 17 ವರ್ಷದ ಶ್ರಮದ ಫಲವಾಗಿದೆ. ‘ಮೊಗ್ಗಿನ ಮನಸು’ ಹೂವಂತೆ ಅರಳಿ, ಇಂದು ಈ ಜೋಡಿ ಕನ್ನಡಿಗರ ಹೃದಯದಲ್ಲಿ ಗಾಢವಾಗಿ ಬೇರುಬಿಟ್ಟಿದೆ.