'ಮ್ಯಾಕ್ಸ್' ಪೈಸಾ ವಸೂಲ್ ಭವಿಷ್ಯ ನುಡಿದ ಸಂಯುಕ್ತಾ ಹೊರನಾಡ್
'ಮ್ಯಾಕ್ಸ್' ಪೈಸಾ ವಸೂಲ್ ಸಿನಿಮಾ ರಿಲೀಸ್ ಮುನ್ನವೇ ಭವಿಷ್ಯ ನುಡಿದ ಸಂಯುಕ್ತಾ ಹೊರನಾಡ್ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ‘ಮ್ಯಾಕ್ಸ್’ ಸಿನಿಮಾ ಡಿಸೆಂಬರ್ 25 ರಂದು ಕ್ರಿಸ್ಮಸ್ ಹಬ್ಬದಂದು ಬಿಡುಗಡೆಯಾಗಲಿದೆ. ಈ ಆ್ಯಕ್ಷನ್ ಪ್ಯಾಕ್ಡ್ ಚಿತ್ರವನ್ನು ಪೈಸಾ ವಸೂಲ್ ಸಿನಿಮಾ ಎಂದು ನಟಿ ಸಂಯುಕ್ತಾ ಹೊರನಾಡ ತಿರುಚಿದ್ದಾರೆ.
ಚಿತ್ರದಲ್ಲಿ ಸಂಯುಕ್ತಾ ಹೊರನಾಡ, ಸುಕೃತಾ ವಾಗ್ಲೆ ಹಾಗೂ ವರಲಕ್ಷ್ಮಿ ಶರತಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಟೀಸರ್ ಹಾಗೂ ಸಾಂಗ್‌ಗಳು ಅಭಿಮಾನಿಗಳಲ್ಲಿ ಹೈಪ್ನುಂಟುಮಾಡಿದ್ದು, ಚಿತ್ರದ ಸ್ಟೈಲ್ ಮತ್ತು ಆ್ಯಕ್ಷನ್ ಈಗಾಗಲೇ ಗಮನ ಸೆಳೆದಿದೆ.
ಕಳೆದ ಎರಡು ವರ್ಷಗಳ ಬಳಿಕ ಕಿಚ್ಚನ ಸಿನಿಮಾ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಿಗೆ ದೊಡ್ಡ ಉತ್ಸವವಾಗಿದೆ. ಈ ಚಿತ್ರದಲ್ಲಿ ಸುದೀಪ್ ಪೊಲೀಸ್ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಡೈರೆಕ್ಟರ್ ವಿಜಯ್ ಕಾರ್ತಿಕೇಯದ ವಿಭಿನ್ನ ನಿರ್ದೇಶನ ಈಗಾಗಲೇ ಕುತೂಹಲ ಕೆರಳಿಸಿದೆ.