Back to Top

ಮದುವೆ ಬಗ್ಗೆ ರಶ್ಮಿಕಾ ಮಂದಣ್ಣ ಮಾತು ಅಭಿಮಾನಿಗಳಲ್ಲಿ ಕುತೂಹಲ

SSTV Profile Logo SStv November 25, 2024
ಮದುವೆ ಬಗ್ಗೆ ರಶ್ಮಿಕಾ ಮಂದಣ್ಣ ಮಾತು
ಮದುವೆ ಬಗ್ಗೆ ರಶ್ಮಿಕಾ ಮಂದಣ್ಣ ಮಾತು
ಮದುವೆ ಬಗ್ಗೆ ರಶ್ಮಿಕಾ ಮಂದಣ್ಣ ಮಾತು ಅಭಿಮಾನಿಗಳಲ್ಲಿ ಕುತೂಹಲ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅವರು ‘ಪುಷ್ಪ 2’ ಚಿತ್ರದ ಪ್ರಚಾರ ಕಾರ್ಯದಲ್ಲಿ ತಮ್ಮ ಲವ್ ಲೈಫ್ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಮದುವೆ ಕುರಿತು ಕೇಳಿದ ಪ್ರಶ್ನೆಗಳಿಗೆ ನಸುನಗುತ್ತಾ ಉತ್ತರಿಸಿದ ರಶ್ಮಿಕಾ, "ನಿಮಗೆಲ್ಲ ಅವರಿಗೆ ಗೊತ್ತಿದೆ" ಎಂದು ಹೇಳಿದ್ದಾರೆ. ನಟಿ ಚಿತ್ರರಂಗದ ವ್ಯಕ್ತಿಯನ್ನಾ ಮದುವೆಯಾಗುತ್ತೀರಾ ಅಥವಾ ಹೊರಗಿನವರನ್ನಾ? ಎಂಬ ಪ್ರಶ್ನೆಗೆ, "ಈ ಬಗ್ಗೆ ಒಂದು ದಿನ ನಾನು ಖುದ್ದಾಗಿ ಹೇಳುತ್ತೇನೆ" ಎಂದು ತಮಾಷೆಯ ಟೋನಿನಲ್ಲಿ ಉತ್ತರಿಸಿದರು. ಇತ್ತೀಚೆಗೆ ವಿಜಯ್ ದೇವರಕೊಂಡ ಸಹ ತಮ್ಮ ಲವ್ ಲೈಫ್ ಬಗ್ಗೆ ಇಂತಹೇ ಸುಳಿವು ನೀಡಿದ್ದು, ಈಗ ರಶ್ಮಿಕಾ ಕೂಡ ಅದೇ ರೀತಿಯ ಉತ್ತರ ನೀಡಿರುವುದರಿಂದ ಅಭಿಮಾನಿಗಳು ಈ ಇಬ್ಬರ ಸಂಬಂಧವನ್ನು ಅನುಮಾನಿಸುತ್ತಿದ್ದಾರೆ. ಶೀಘ್ರದಲ್ಲೇ ರಶ್ಮಿಕಾ ಮತ್ತು ವಿಜಯ್ ಸಂಬಂಧ ಕುರಿತು ಅಧಿಕೃತ ಮಾಹಿತಿ ಬರಬಹುದೇ? ಎಂಬುದಾಗಿ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿದೆ.