Back to Top

ಮಾದಕ ವ್ಯಸನಗಳ ವಿರುದ್ಧ ಜಾಗೃತಿ ಮೂಡಿಸಿದ ಉಪೇಂದ್ರ

SSTV Profile Logo SStv December 4, 2024
ಮಾದಕ ವ್ಯಸನಗಳ ಜಾಗೃತಿ ಮೂಡಿಸಿದ ಉಪೇಂದ್ರ
ಮಾದಕ ವ್ಯಸನಗಳ ಜಾಗೃತಿ ಮೂಡಿಸಿದ ಉಪೇಂದ್ರ
ಮಾದಕ ವ್ಯಸನಗಳ ವಿರುದ್ಧ ಜಾಗೃತಿ ಮೂಡಿಸಿದ ಉಪೇಂದ್ರ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಹೊಸ ಸಿನಿಮಾ ‘ಯುಐ’ ರಿಲೀಸ್‌ಗೆ ಸಿದ್ಧತೆ ನಡೆಸುತ್ತಿದ್ದರೂ, ಹುಬ್ಬಳ್ಳಿ ಬಿವಿಬಿ ಕಾಲೇಜುನಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ಅಪಾಯಗಳ ಕುರಿತು ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಉಪೇಂದ್ರ ವಿದ್ಯಾರ್ಥಿಗಳನ್ನು ಉದ್ದೇಶಿಸಿ, “ನಿಮ್ಮೊಳಗಿನ ಆತ್ಮನ ಮಾತು ಕೇಳಿ, ಹೊರಗಿನ ವ್ಯಸನಗಳಿಗೆ ದಾಸರಾಗಬೇಡಿ” ಎಂದು ಕಿವಿಹಿಡಿದರು. ತಮ್ಮ ‘ಐಮ್ ಗಾಡ್’ ಡೈಲಾಗ್‌ ಹಂಚಿಕೊಂಡು, “ನೀವೆಲ್ಲ ವಾರ್ನರ್ಸ್” ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ‘ಯುಐ’ ಸಿನಿಮಾದ ಡೈಲಾಗ್‌ಗಳು ಮತ್ತು ಟ್ರೈಲರ್‌ ಫುಲ್‌ ಹೈಪ್‌ ಕ್ರಿಯೇಟ್ ಮಾಡಿದ್ದು, ಉಪೇಂದ್ರ AI ಯುಗದ ಸವಾಲುಗಳ ಬಗ್ಗೆ ಗಮನಸೆಳೆಯುವಂತೆ ಮಾಡಿದ್ದಾರೆ. ಈ ಸಿನಿಮಾ ಡಿಸೆಂಬರ್ 20ರಂದು ಅದ್ದೂರಿಯಾಗಿ ಬಿಡುಗಡೆಗೊಳ್ಳಲಿದೆ.