ಗಳಗಳನೇ ಕಣ್ಣೀರಿಟ್ಟ ಅಲ್ಲು ಅರ್ಜುನ್ ಪತ್ನಿ ಮಡದಿಗೆ ಮುತ್ತಿಟ್ಟು ಪೊಲೀಸ್ ಜೀಪ್ ಹತ್ತಿದ ಐಕಾನ್ ಸ್ಟಾರ್


ಗಳಗಳನೇ ಕಣ್ಣೀರಿಟ್ಟ ಅಲ್ಲು ಅರ್ಜುನ್ ಪತ್ನಿ ಮಡದಿಗೆ ಮುತ್ತಿಟ್ಟು ಪೊಲೀಸ್ ಜೀಪ್ ಹತ್ತಿದ ಐಕಾನ್ ಸ್ಟಾರ್ ತೆಲುಗು ನಟ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಡಪಲ್ಲಿ ಪೊಲೀಸರಿಂದ ಬಂಧಿತರಾಗಿದ್ದಾರೆ. ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಪುಷ್ಪ-2 ಪ್ರಿಮಿಯರ್ ಶೋ ವೇಳೆ ನೂಕುನುಗ್ಗಲು ಉಂಟಾಗಿ ರೇವತಿ ಎಂಬ ಮಹಿಳೆ ಪ್ರಾಣ ಕಳೆದುಕೊಂಡ ಘಟನೆ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.
ಬಂಧನದ ಸಮಯದಲ್ಲಿ ಪತ್ನಿ ಸ್ನೇಹಾ ರೆಡ್ಡಿ ಕಣ್ಣೀರು ಹಾಕಿದ್ದು, ಅಲ್ಲು ಅರ್ಜುನ್ ಪತ್ನಿಗೆ ಧೈರ್ಯ ನೀಡುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಪತ್ನಿಯ ಭುಜ ತಟ್ಟಿದ ಅಲ್ಲು, ಮುತ್ತಿಟ್ಟು ಧೈರ್ಯ ತುಂಬಿದ್ರು.
ಆ ಘಟನೆಯ ನಂತರ ಅಲ್ಲು ಅರ್ಜುನ್, ರೇವತಿ ಕುಟುಂಬಕ್ಕೆ 25 ಲಕ್ಷ ರೂ. ಸಹಾಯ ಘೋಷಿಸಿ, ಸಂತಾಪ ಸೂಚಿಸಿದರು. ಆದರೆ, ಥಿಯೇಟರ್ ಮಾಲೀಕ, ಮ್ಯಾನೇಜರ್ ಸೇರಿದಂತೆ ಅಲ್ಲು ಅರ್ಜುನ್ ವಿರುದ್ಧ ಬಿಎನ್‌ಎಸ್ 105, 118(1) r/w3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಘಟನೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
