'ಕೆಡಿ' ಪ್ಯಾನ್ ಇಂಡಿಯಾ ಟೀಸರ್ ಟೂರ್ ಸಕ್ಸಸ್: ವಿಶೇಷ ವಿಡಿಯೋ ಹಂಚಿಕೊಂಡ ಜೋಗಿ ಪ್ರೇಮ್
SStv
July 16, 2025
ಡೈರೆಕ್ಟರ್ ಜೋಗಿ ಪ್ರೇಮ್ ಅವರ 'ಕೆಡಿ' ಸಿನಿಮಾ ಪ್ಯಾನ್ ಇಂಡಿಯಾ ಟೀಸರ್ ಟೂರ್ ಭರ್ಜರಿಯಾಗಿ ಯಶಸ್ವಿಯಾಗಿದೆ. ಐದು ರಾಜ್ಯಗಳಲ್ಲಿ ಮೂರು ದಿನಗಳಲ್ಲಿ ನಡೆದ ಈ ಟೂರ್‌ನಲ್ಲಿ ಪ್ರೇಮ್ ಜೊತೆ ಧ್ರುವ ಸರ್ಜಾ, ಸಂಜಯ್ ದತ್, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ ಸೇರಿದಂತೆ ಟೀಂ ಭಾಗವಹಿಸಿತ್ತು.
ಪ್ರತಿಯೊಂದು ರಾಜ್ಯದಲ್ಲಿಯೂ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಈ ಯಶಸ್ಸನ್ನು ಸಂಭ್ರಮಿಸಲು ಜೋಗಿ ಪ್ರೇಮ್ ಸ್ಪೆಷಲ್ ಟೂರ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಬೆಂಗಳೂರು, ಚೆನ್ನೈ, ಮುಂಬೈ, ಕೇರಳ ಹಾಗೂ ಹೈದ್ರಾಬಾದ್ ಈ ಐದು ಸ್ಥಳಗಳ ಪ್ರವಾಸದ ಹೈಲೈಟ್ಸ್ ಸೇರಿವೆ.
ಮುಂಬೈ ಟೂರ್‌ನಲ್ಲಿ ಮರಾಠಿ ಭಾಷೆ ಕುರಿತು ಕೇಳಿದ ಪ್ರಶ್ನೆಗೂ, ಚೆನ್ನೈನಲ್ಲಿ ತಮಿಳು ಸಿನಿಮಾ ಬಿಡುಗಡೆ ವಿವಾದಕ್ಕೂ ತಂಡ ಸ್ಫಷ್ಟವಾದ ಉತ್ತರ ನೀಡಿದ್ದು ಗಮನಸೆಳೆದಿದೆ. ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್ ಕನ್ನಡದ ಪರವಾಗಿ ನಿಭಾಯಿಸಿದ್ದಾರೆ.
ಕೆಡಿ ಚಿತ್ರದ ಪ್ಯಾನ್ ಇಂಡಿಯಾ ಟೀಸರ್ ಈ ಎಲ್ಲಾ ಟೂರ್‌ಗಳಿಂದಾಗಿ ಭಾರಿ ಹೈಪ್ ಸೃಷ್ಟಿಸಿದ್ದು, ಈಗಾಗಲೇ ಬಿಡುಗಡೆಯಾದ ಟೀಸರ್‌ಗೂ ಭರ್ಜರಿ ಸ್ಪಂದನೆ ಬಂದಿದೆ. ಪ್ರಸ್ತುತ ಜೋಗಿ ಪ್ರೇಮ್ ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
