Back to Top

‘ಕೆಡಿ’ ನಂತರ ಧ್ರುವ ಸರ್ಜಾ ದಿಟ್ಟ ನಿರ್ಧಾರ – ಮೂರು ಮೆಗಾ ಸಿನಿಮಾ ಒಪ್ಪಿಗೆ!

SSTV Profile Logo SStv June 30, 2025
‘ಕೆಡಿ’ ನಂತರ ಧ್ರುವ ಸರ್ಜಾ ದಿಟ್ಟ ನಿರ್ಧಾರ
‘ಕೆಡಿ’ ನಂತರ ಧ್ರುವ ಸರ್ಜಾ ದಿಟ್ಟ ನಿರ್ಧಾರ

‘ಕೆಡಿ’ ಚಿತ್ರದ ಯಶಸ್ಸಿನ ನಂತರ ಧ್ರುವ ಸರ್ಜಾ ಮುಂದೇನು ಮಾಡಲಿದ್ದಾರೆ ಎಂಬ ಕುತೂಹಲ ಇಡೀ ಸ್ಯಾಂಡಲ್ವುಡ್‌ನಲ್ಲಿ ಮನೆಮಾಡಿತ್ತು. ಈಗ ಈ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಧ್ರುವ ಸರ್ಜಾ ಈಗ ಮೂರು ಭಾರೀ ಬಜೆಟ್ ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಆಪ್ತ ಮೂಲಗಳ ಪ್ರಕಾರ, ಧ್ರುವ ಕನ್ನಡದ ಮೂರು ಪ್ರತಿಭಾಶಾಲಿ ನಿರ್ದೇಶಕರಿಗೆ ತಮ್ಮ ಕಾಲ್‌ಶೀಟ್ ನೀಡಿದ್ದಾರೆ. ಮೊದಲ ಚಿತ್ರವನ್ನು ‘ಕೆರೆಯಬೆಟೆ’ ಖ್ಯಾತಿಯ ರಾಜ್ ಗುರು ನಿರ್ದೇಶಿಸಲಿದ್ದು, ಧ್ರುವಗಾಗಿ ವಿಶೇಷ ಕಥೆ ರೆಡಿಯಾಗಿದೆ. ಈ ಚಿತ್ರವನ್ನು ಹಿಂದಿಯ ನಿರ್ಮಾಣ ಸಂಸ್ಥೆಯೊಂದು ನಿರ್ಮಾಣ ಮಾಡಲಿದೆ.

ಎರಡನೇ ಚಿತ್ರವನ್ನು ‘ಮಫ್ತಿ’ ಹಾಗೂ ‘ಭೈರತಿ ರಣಗಲ್’ ಖ್ಯಾತಿಯ ನರ್ತನ್ ನಿರ್ದೇಶಿಸಲಿದ್ದು, ಇದು ಮತ್ತೆ ಧ್ರುವ–ನರ್ತನ್ ಕಾಂಬಿನೇಷನ್‌ನ ವಿಶೇಷ ಪ್ರಯೋಗವಾಗಲಿದೆ. ಈ ಚಿತ್ರಕ್ಕೆ ‘ಕೆಡಿ’ ನಿರ್ಮಾಪಕರು ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡುತ್ತಿದ್ದಾರೆ ಎನ್ನಲಾಗಿದೆ.

ಮೂರನೇ ನಿರ್ದೇಶಕರ ಹೆಸರು ಇನ್ನೂ ಬಹಿರಂಗವಾಗಿಲ್ಲ, ಆದರೆ ಅವರು ಕೂಡ ಕನ್ನಡದ ಪ್ರತಿಭಾವಂತ ನಿರ್ದೇಶಕರ ಪೈಕಿ ಒಬ್ಬರಾಗಿದ್ದಾರೆ.