ಕನ್ನಡ-ತೆಲುಗು ಎರಡರಲ್ಲೂ ಪ್ರಭಾವ ಬೀಳಿಸಿದ 'ಜೂನಿಯರ್' – ಕಿರೀಟಿ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು?


ಕಿರೀಟಿ ರೆಡ್ಡಿ ಅಭಿನಯದ ಚೊಚ್ಚಲ ಚಿತ್ರ 'ಜೂನಿಯರ್' ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಆರಂಭ ದಾಖಲಿಸಿಕೊಂಡಿದೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ರಿಲೀಸ್ ಆದ ಈ ಚಿತ್ರ, ತನ್ನ ಮೊದಲ ದಿನವೇ ₹1.40 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಕಿರೀಟಿಗೆ ಯಶಸ್ವಿ ಪ್ರಾರಂಭ ಒದಗಿಸಿದೆ.
ಶ್ರೀಲೀಲಾ, ರವಿಚಂದ್ರನ್, ಜೆನಿಲಿಯಾ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ರಾಜಕಾರಣಿ ಜನಾರ್ಧನ್ ರೆಡ್ಡಿ ಪುತ್ರನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಕಿರೀಟಿ, ಪೋಷಕರ ಖ್ಯಾತಿಯ ಜೊತೆಗೆ ತನ್ನ ನಟನೆಯಿಂದ ಗಮನ ಸೆಳೆದಿದ್ದಾರೆ.
ಅಂತೆಯೇ, ಕನ್ನಡದಲ್ಲಿ- ರಿಲೀಸ್ ಆದ ಯುವ ರಾಜ್ ಕುಮಾರ್ ನಟನೆಯ ‘ಎಕ್ಕ’ ಸಿನಿಮಾ ಮೊದಲ ದಿನವೇ ₹1.60 ಕೋಟಿ ರೂ. ಗಳಿಸಿದ್ದು, ಕಿರೀಟಿ ಮತ್ತು ಯುವ ಇಬ್ಬರೂ ಯುವ ತಾರೆಯರಾಗಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
‘ಜೂನಿಯರ್’ ಗೆ ಮೊದಲ ದಿನದ ಈ ಪ್ರದರ್ಶನ ಮುಂದುವರಿದರೆ, ಕಿರೀಟಿ ಸಿನಿಮಾಕ್ಕೆ ಮುಕ್ತವಾಗಿ ‘ವಿಜಯದ ಜೂನಿಯರ್’ ಎನಿಸಬಹುದು!
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
